HomeLive NewsBIG NEWS: ಮೌಂಟ್ ಎವರೆಸ್ಟ್ ನಿಂದ ಇಳಿಯುವಾಗ ದುರಂತ: ಇಬ್ಬರು ಭಾರತೀಯ ಪರ್ವತಾರೋಹಿಗಳು ಸಾವು

BIG NEWS: ಮೌಂಟ್ ಎವರೆಸ್ಟ್ ನಿಂದ ಇಳಿಯುವಾಗ ದುರಂತ: ಇಬ್ಬರು ಭಾರತೀಯ ಪರ್ವತಾರೋಹಿಗಳು ಸಾವು

ನವದೆಹಲಿ: ಮೌಂಟ್ ಎವರೆಸ್ಟ್ ಶಿಖರವೇರಿ ಹಿಂತಿರುಗುತ್ತಿದ್ದಾಗ ಇಬ್ಬರು ಭಾರತೀಯ ಪರ್ವತಾರೋಹಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೌಂಟ್ ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಹತ್ತಿದ್ದ ಇಬ್ಬರೂ ಶಿಖರದಿಂದ ವಾಪಸ್ ಆಗುವಾಗ ತೀವ್ರ ಬಳಲಿಕೆಯಿಂದ ಮೃತಪಟ್ಟಿದ್ದಾರೆ. ಮೃತರನ್ನು ಅರುಣ್ ಕುಮಾರ್ ತಿವಾರಿ ಹಾಗೂ ಸಂದೀಪ್ ಅರೆ ಎಂದು ಗುರುತಿಸಲಾಗಿದೆ.

ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಏರಿ, ಕೆಳಗಿಳಿಯುವಾಗ ಇವರಿಬ್ಬರೂ ತೀವ್ರ ಆಯಾಸಗೊಂಡಿದ್ದರು. ಎಷ್ಟೇ ಪ್ರಯತ್ನಿಸಿದರೂ ಅವರನ್ನು ಬದುಕಿಸಲು ಸಾಧ್ಯವಾಗಿಲ್ಲ ಎಂದು ನೇಪಾಳದ ಎಕ್ಸ್ ಪೆಡಿಶನ್ ಆಪರೇಟರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಿಷಿ ಭಂಡಾರಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂದೀಪ್ ಅರೆ ಅವರು ಬುಧವಾರ ಹಾಗೂ ಅರುಣ್ ಕುಮಾರ್ ತಿವಾರಿ ಗುರುವಾರ ಸಂಜೆ 5:30ಕ್ಕೆ ಎವರೆಸ್ಟ್ ಶಿಖರ ಏರಿದ್ದರು. ಸಂದೀಪ್ ಅರೆ ಸೇರಿದಂತೆ ಮೂವರು ಭಾರತೀಯರು 8,848.86 ಮೀಟರ್ ಎತ್ತರದ ಎವರೆಸ್ಟ್ ಶಿಖರವನ್ನು ಏರಿದ ಒಟ್ಟು 274 ಪರ್ವತಾರೋಹಿಗಳ ತಂಡದಲ್ಲಿದ್ದರು. ಇದು ಒಂದೇ ದಿನದಲ್ಲಿ ಅತಿ ಹೆಚ್ಚು ಜನರು ಶಿಖರವನ್ನು ಏರಿದ ಹೊಸ ದಾಖಲೆಯಾಗಿದೆ. ಉಳಿದ ಇಬ್ಬರು ಭಾರತೀಯರೆಂದರೆ ತುಳಸಿ ರೆಡ್ಡಿ ಪಾಲ್ಪುನೂರಿ ಹಾಗೂ ಅಜಯ್ ಪಾಲ್ ಸಿಂಗ್ ಧಲಿವಾಲ್. ಭಾರತದ ಲಕ್ಷ್ಮೀಕಾಂತ್ ಮಂಡಲ್ ಅವರು ಕೂಡ ಗುರುವಾರ ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ತಲುಪಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular