HomeKarnatakaSHOCKING NEWS: ತಾಯಿಯ ಖಾಸಗಿ ಫೋಟೋಗಳನ್ನು ಪ್ರಿಯಕರನಿಗೆ ಕಳುಹಿಸಿದ ಮಗಳು

SHOCKING NEWS: ತಾಯಿಯ ಖಾಸಗಿ ಫೋಟೋಗಳನ್ನು ಪ್ರಿಯಕರನಿಗೆ ಕಳುಹಿಸಿದ ಮಗಳು

ಬೆಂಗಳೂರು: ಬರಬರುತ್ತಾ ಇಂದಿನ ಯುವ ಜನತೆಯ ಮನಸ್ಥಿತಿ ಯಾವ ಮಟ್ಟಕ್ಕೆ ಇಳಿಯುತ್ತಿದೆ. ಇಲ್ಲೋರ್ವ ಮಗಳು ತನ್ನ ತಾಯಿಯ ಖಾಸಗಿ ಫೋಟೋಗಳನ್ನು ತನ್ನ ಪ್ರಿಯಕರನಿಗೆ ಕಳುಹಿಸಿರುವ ವಿಲಕ್ಷಣ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಮಗಳು ತನ್ನ ಪ್ರಿಯಕರನಿಗೆ ತನ್ನ ತಾಯಿ, ಸಂಬಂಧಿಕರ ಖಾಸಗಿ ಫೋಟೋ, ವಿಡಿಯೋಗಳನ್ನು ಕಳುಹಿಸಿದ್ದು, ಮಗಳು ಹಾಗೂ ಆಕೆಯ ಪ್ರೊಯಕರನ ವಿರುದ್ಧ ತಾಯಿ ಬೆಂಗಳೂರಿನ ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿದ್ಯಾಭ್ಯಾಸಕ್ಕೆಂದು 23 ವರ್ಷದ ಮಗಳು ಪೋಷಕರ ಬಳಿ ಮೊಬೈಲ್ ಪಡೆದುಕೊಂಡಿದ್ದಳು. ತಿಂಗಳ ಹಿಂದೆ ಅಪರುಚಿತ ಯುವಕನೊಬ್ಬನ ಜೊತೆ ಮಾತನಾಡುವಾಗ ಸಿಕ್ಕಿಬಿದ್ದಿದ್ದಳು. ಈ ವೇಳೆ ತಾಯಿ ಪ್ರಶ್ನಿಸಿದಾಗ ಮೊಬೈಲ್, ಪಾಸ್ ವರ್ಡ್ ಕೊಡದೇ ತಪ್ಪಿಸಿಕೊಂಡಿದ್ದಳು. ಈ ಬಗ್ಗೆ ತಾಯಿ ವಿಷಯವನ್ನು ತಂದೆಗೆ ತಿಳಿಸಿದ್ದರು. ಅಲ್ಲದೇ ಇತ್ತೀಚೆಗೆ ಮೊಬೈಲ್ ಪಾಸ್ ವರ್ಡನ್ನೂ ಪಡೆದಿದ್ದರು.

ತಾಯಿ ಮೊಬೈಲ್ ಪರಿಶೀಲಿಸಿದಾಗ ಮಗಳ ಕೃತ್ಯ ಬಯಲಾಗಿದೆ. ಮಗಳು ತನ್ನ ಪ್ರಿಯಕರನಿಗೆ ತಾಯಿಯ ಹಾಗೂ ತಾಯಿಯ ಸಹೋದರಿಯ ಕೆಲ ಖಾಸಗಿ ಫೋಟೋ, ವಿಡಿಯೋಗಳನ್ನು ಕಳುಹಿಸಿದ್ದಾಳೆ. ಮಗಳ ಕೃತ್ಯ ಕಂಡು ಶಾಕ್ ಆದ ತಾಯಿ ನೇರವಾಗಿ ಪೊಲೀಸ್ ಠಾಣೆಗೆ ಬಂದು ಮಗಳು ಹಾಗೂ ಆಕೆಯ ಪ್ರಿಯಕರನ ವಿರುದ್ಧ ದೂರು ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular