HomeKarnatakaತಾಯಿ ಹಾಗೂ ಮೂರು ವರ್ಷದ ಮಗು ಶವವಾಗಿ ಪತ್ತೆ; ಸಾವಿನ ಸುತ್ತ ಅನುಮಾನದ ಹುತ್ತ...!

ತಾಯಿ ಹಾಗೂ ಮೂರು ವರ್ಷದ ಮಗು ಶವವಾಗಿ ಪತ್ತೆ; ಸಾವಿನ ಸುತ್ತ ಅನುಮಾನದ ಹುತ್ತ…!

ಚಿಕ್ಕಬಳ್ಳಾಪುರ: ತಾಯಿ ಹಾಗೂ ಮೂರು ವರ್ಷದ ಹೆಣ್ಣು ಮಗು ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹುದಗೂರು ಗ್ರಾಮದಲ್ಲಿ ನಡೆದಿದೆ.

25 ವರ್ಷದ ಸುಧಾಮಣಿ ಹಾಗೂ ಮೂರು ವರ್ಷದ ಮಗು ಚಾರ್ವಿ ಮೃತರು. ಮಗುವಿನ ಶವ ಮನೆಯಲ್ಲಿ ಪತ್ತೆಯಾಗಿದ್ದರೆ, ತಾಯಿ ಸುಧಾಮಣಿ ಮೃತದೇಹ ಮನೆಯ ಬಳಿಯ ಬಾವಿಯಲ್ಲಿ ಪತ್ತೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೌಟುಂಬಿಕ ಕಲಹಕ್ಕೆ ಸುಧಾಮಣಿ ತನ್ನ ಮಗಳನ್ನು ಕತ್ತು ಹಿಸುಕಿ ಕೊಂದು ಬಳಿಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪತಿಯ ಮನೆಯವರು ಆರೋಪಿಸಿದ್ದಾರೆ. ಆದರೆ ಸುಧಾಮಣಿ ಪೋಷಕರು, ಪತಿ ಹಾಗೂ ಮನೆಯವರೇ ಮಗು ಹಾಗೂ ತಾಯಿಯನ್ನು ಕೊಂದಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

5 ವರ್ಷಗಳ ಹಿಂದೆ ರವಿ ಹಾಗೂ ಸುಧಾಮಣಿ ವಿವಾಹವಾಗಿದ್ದರು. ದಂಪತಿಗೆ ಒಂದು ಗಂಡು ಮಗು ಹಾಗೂ 3 ವರ್ಷದ ಹೆಣ್ಣು ಮಗುವಿತ್ತು. ಆದರೆ ಈಗ ತಾಯಿ ಹಾಗೂ ಹೆಣ್ಣು ಮಗು ಇಬ್ಬರು ಶವವಾಗಿ ಪತ್ತೆಯಾಗಿದ್ದು, ತಾಯಿ ಮಗುವಿನ ಸಾವು ಕೊಲೆಯೋ, ಆತ್ಮಹತ್ಯೆಯೋ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular