HomeKarnatakaಮೋದಿ 11 ದಿನ ಉಪವಾಸ ಮಾಡಿದ್ದು ಡೌಟು: ಮಾಜಿ ಸಿಎಂ ಮೊಯ್ಲಿ ಹೇಳಿಕೆಗೆ ಸಿ.ಟಿ. ರವಿ...

ಮೋದಿ 11 ದಿನ ಉಪವಾಸ ಮಾಡಿದ್ದು ಡೌಟು: ಮಾಜಿ ಸಿಎಂ ಮೊಯ್ಲಿ ಹೇಳಿಕೆಗೆ ಸಿ.ಟಿ. ರವಿ ಆಕ್ರೋಶ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ 11 ದಿನ ಉಪವಾಸ ಮಾಡಿರುವುದು ಡೌಟು. 11 ದಿನ ಉಪವಾಸ ಮಾಡಿದರೆ ಮನುಷ್ಯ ಬದುಕಲು ಸಾಧ್ಯವಿಲ್ಲ ಎಂದು ಮೋದಿ ಅವರ ವ್ರತದ ಬಗ್ಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಎಳನೀರು ಮಾತ್ರ ಕುಡಿದು ಉಪವಾಸ ಮಾಡಿದರೆ ಒಂದೆರಡು ದಿನದಲ್ಲಿ ಮನುಷ್ಯ ಕುಸಿದು ಬೀಳುತ್ತಾನೆ. ಉಪವಾಸ ಎಂದು ಹೇಳಿ ಮೋದಿ ಜೋರಾಗಿ ಓಡಾಡಿದರು. ಉಪವಾಸ ಇದ್ದವರ ರೀತಿ ಅವರು ಕಂಡುಬರಲಿಲ್ಲ. ಅವರ ನಾಟಕ ಇನ್ನೂ ನಡೆಯಲ್ಲ ಎಂದು ಮೊಯ್ಲಿ ಹೇಳಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಸಿ.ಟಿ. ರವಿ ಈ ವಿಚಾರದಲ್ಲಿ ಮೊಯ್ಲಿ ಅವರ ಸರ್ಟಿಫಿಕೇಟ್ ನಮಗೆ ಬೇಕಿಲ್ಲ. ಘನತೆಗೆ ತಕ್ಕಂತೆ ಮೊಯ್ಲಿ ಅವರು ಮಾತನಾಡಲಿ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂತಹ ಹೇಳಿಕೆ ಮೊಯ್ಲಿ ಅವರ ಅಪ್ರಭುದ್ಧತೆ ತೋರಿಸುತ್ತದೆ ಎಂದು ವಿಧಾನಸಭೆ ಉಪ ನಾಯಕ ಅರವಿಂದ್ ಬೆಲ್ಲದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular