HomeBeautyಅಗಸೆ ಬೀಜದ ಪುಡಿಗೆ ಇದನ್ನು ಬೆರೆಸಿ ಮುಖಕ್ಕೆ ಹಚ್ಚಿದ್ರೆ ಹೆಚ್ಚುತ್ತೆ ಮುಖದ ಸೌಂದರ್ಯ

ಅಗಸೆ ಬೀಜದ ಪುಡಿಗೆ ಇದನ್ನು ಬೆರೆಸಿ ಮುಖಕ್ಕೆ ಹಚ್ಚಿದ್ರೆ ಹೆಚ್ಚುತ್ತೆ ಮುಖದ ಸೌಂದರ್ಯ

ಅಗಸೆ ಬೀಜದಲ್ಲಿ ಫೈಬರ್, ಉತ್ಕರ್ಷಣಾ ನಿರೋಧಕ ಅಂಶಗಳಿವೆ. ಕೂದಲಿನ ಆರೋಗ್ಯ ಕಾಪಾಡಲು ಇದನ್ನು ಹೆಚ್ಚಾಗಿ ಬಳಸುತ್ತಾರೆ.

ಆದರೆ ಈ ಅಗಸೆ ಬೀಜದಿಂದ ಚರ್ಮದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಇದರಿಂದ ಚರ್ಮದ ಅಲರ್ಜಿ, ದದ್ದುಗಳು, ಚರ್ಮಕ್ಕೆ ಸಂ  ಬಂಧಿಸಿದ ಇತರ ಸಮಸ್ಯೆಗಳನ್ನು ನಿವಾರಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*1 ಚಮಚ ಅಗಸೆ ಬೀಜದ ಪುಡಿಗೆ, ½ ಚಮಚ ದಾಲ್ಚಿನ್ನಿ ಪುಡಿ, 1 ಚಮಚ ಮೊಸರು ಇವಿಷ್ಟನ್ನು ಮಿಕ್ಸ್ ಮಾಡಿ ನಯವಾದ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ 5 ನಿಮಿಷಗಳ ಕಾಲ ಮಸಾಜ್ ಮಾಡಿ. 10 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆ ಮಾಡಿ.

* 1 ಚಮಚ ಅಗಸೆ ಬೀಜದ ಪುಡಿ, 1 ಚಮಚ ಹಾಲು, 1 ಚಿಟಿಕೆ ಅರಶಿನ ಎಲ್ಲವನ್ನೂ ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ಪ್ರತಿದಿನ ಮಾಡಿದರೆ ಮುಖದಲ್ಲಿರುವ ಕಲೆಗಳು ಮಾಯವಾಗಿ ಮುಖದ ಚರ್ಮ ಕ್ಲೀನ್ ಆಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular