HomeKarnatakaBIG NEWS: ಹಾಸ್ಟೇಲ್ ನಿಂದ ಕರೆದೊಯ್ದು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಕಿರುಕುಳ; ಆರೋಪಿ ಅರೆಸ್ಟ್

BIG NEWS: ಹಾಸ್ಟೇಲ್ ನಿಂದ ಕರೆದೊಯ್ದು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಕಿರುಕುಳ; ಆರೋಪಿ ಅರೆಸ್ಟ್

ರಾಮನಗರ: ಅಪ್ರಾಪ್ತ ಬಾಲಕಿಯನ್ನು ಹಾಸ್ಟೇಲ್ ನಿಂದ ಕರೆದೊಯ್ದು ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ರಾಮನಗರದಲ್ಲಿ ನಡೆದಿದೆ.

15 ವರ್ಷದ ಅಪ್ರಾಪ್ತಳನ್ನು ಹಾಸ್ಟೇಲ್ ನಿಂದ ಟೀ ಕುಡಿಯಲೆಂದು ಕರೆದೊಯ್ದ 36 ವರ್ಷದ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಹಾಸ್ಟೇಲ್ ನಲ್ಲಿ ತಾನು ಬಾಲಕಿಯ ಅಣ್ಣ ಎಂದು ಪರಿಚಯಿಸಿಕೊಂಡು ಬಾಲಕಿಯನ್ನು ಟೀ ಕುಡಿಯಲು ಕರೆದೊಯ್ದಿದ್ದ.

ಬಾಲಕಿಯನ್ನು ಕರೆದೊಯ್ದ ವ್ಯಕ್ತಿ ಒಂದುಗಂಟೆಯಾದರೂ ವಾಪಾಸ್ ಕರೆತರದಿದ್ದಾಗ ಹಾಸ್ಟೇಲ್ ಸಿಬ್ಬಂದಿ ಬಾಲಕಿಯ ಕುಟುಂಬದವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲದೇ ರಾಮನಗರ ಮಹಿಳಾ ಠಾಣೆಗೂ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಶೋಧಕಾರ್ಯ ಆರಂಭಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಪ್ರಾಪ್ತ ಬಾಲಕಿಯನ್ನು ಆರೋಪಿ ಮಾವಿನ ತೋಪಿಗೆ ಕರೆದೊಯ್ದಿದ್ದ. ತಕ್ಷಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಾಲಕಿಯನ್ನು ರಕ್ಷಿಸಿದ್ದಾರೆ. ಒಂದು ವರ್ಷದಿಂದ ಬಾಲಕಿಯನ್ನು ಲೈಂಗಿಕವಾಗಿ ಆರೋಪಿ ಬಳಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪೋಕ್ಸೋ ಕೇಸ್ ನಡಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular