HomeLatest NewsBREAKING : ಕಲಬುರಗಿ ನಗರದಲ್ಲಿ ತಡರಾತ್ರಿ ಲಘು ಭೂಕಂಪ ; ಹೆದರಿ ಮನೆಯಿಂದ ಹೊರಗೆ ಓಡಿಬಂದ...

BREAKING : ಕಲಬುರಗಿ ನಗರದಲ್ಲಿ ತಡರಾತ್ರಿ ಲಘು ಭೂಕಂಪ ; ಹೆದರಿ ಮನೆಯಿಂದ ಹೊರಗೆ ಓಡಿಬಂದ ಜನ |Earthquake

ಕಲಬುರಗಿ: ನಗರದಲ್ಲಿ ತಡರಾತ್ರಿ ಭೂಕಂಪನದ ಅನುಭವವಾಗಿದ್ದು, ಹಲವು ಪ್ರದೇಶಗಳ ನಿವಾಸಿಗಳು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿಬಂದ ಘಟನೆ ನಡೆದಿದೆ.

ಕಲಬುರಗಿ ನಗರದಲ್ಲಿ ಬುಧವಾರ ತಡರಾತ್ರಿ ಸುಮಾರು 1.30 ಗಂಟೆ ವೇಳೆಗೆ ಲಘು ಭೂಕಂಪನದ ಅನುಭವವಾಗಿದ್ದು, ಹರಿಕೃಷ್ಣ ನಗರ ಸೇರಿದಂತೆ ಹಲವು ಪ್ರದೇಶಗಳ ನಿವಾಸಿಗಳು ಆತಂಕಗೊಂಡು ಮನೆಗಳಿಂದ ಹೊರಗೆ ಓಡಿಬಂದರು.ಬುಧವಾರ ತಡರಾತ್ರಿ ಸುಮಾರು 1.30 ಗಂಟೆ ವೇಳೆಗೆ ಹರಿಕೃಷ್ಭ ನಗರ, ಮಹಾವೀರ ನಗರ ಸೇರಿದಂತೆ ಹಲವು ಕಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿ ಕೆಲ ಕ್ಷಣಗಳ ಕಾಲ ಕಂಪಿಸಿದ ಅನುಭವ ಸ್ಥಳೀಯರಿಗೆ ಆಗಿದೆ. ಮನೆಗಳಲ್ಲಿದ್ದ ಜನರು ಏಕಾಏಕಿ ಕಂಪನವನ್ನು ಅನುಭವಿಸಿ ಆತಂಕಗೊಂಡು ಸುರಕ್ಷತೆಗಾಗಿ ಹೊರಗೆ ಬಂದರು.

ಹರಿಕೃಷ್ಭ ನಗರ, ಮಹಾವೀರ ನಗರ ಸೇರಿದಂತೆ ಸುತ್ತಮುತ್ತಲಿನ ಕೆಲವು ಬಡಾವಣೆಗಳ ನಿವಾಸಿಗಳು 4 ರಿಂದ 5 ಸೆಕೆಂಡ್ ಭೂಕಂಪನದ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಹಂಚಿಕೊಂಡಿದ್ದಾರೆ. ಕೆಲವರು ಮನೆಯಲ್ಲಿ ವಸ್ತುಗಳು ಸ್ವಲ್ಪ ಅಲ್ಲಾಡಿದ ಅನುಭವವಾಗಿದೆ ಎಂದು ತಿಳಿಸಿದ್ದಾರೆ.ಸದ್ಯಕ್ಕೆ ಭೂಕಂಪನದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿ ಸಂಭವಿಸಿರುವ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಭೂಕಂಪನದ ತೀವ್ರತೆ ಹಾಗೂ ಕೇಂದ್ರಬಿಂದುವಿನ ಬಗ್ಗೆ ಸಂಬಂಧಿತ ಇಲಾಖೆಗಳಿಂದ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಭೂಕಂಪನದ ಅನುಭವದಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಬಳಿಕ ಪರಿಸ್ಥಿತಿ ಸಹಜಗೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular