HomeLatest Newsಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಶೂ-ಸಾಕ್ಸ್, ಪಾದರಕ್ಷೆ ವಿತರಣೆ

ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಶೂ-ಸಾಕ್ಸ್, ಪಾದರಕ್ಷೆ ವಿತರಣೆ

ಬೆಂಗಳೂರು: ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಶೂ-ಸಾಕ್ಸ್/ಪಾದರಕ್ಷೆಗಳನ್ನು ವಿತರಿಸುವ ಸಂಬಂಧ ಮಾರ್ಗಸೂಚಿ’ ಹೊರಡಿಸಲಾಗಿದೆ.

2026-27 ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಶೂ-ಸಾಕ್ಸ್ / ಪಾದರಕ್ಷೆಗಳನ್ನು ಒದಗಿಸುವ ಸಂಬಂಧ ಸರಬರಾಜುದಾರರುಗಳನ್ನು ಗುರುತಿಸಲಾಗಿರುತ್ತದೆ. ಅದರಂತೆ ಸರಬರಾಜು ಪ್ರಾರಂಭವಾಗಿರುತ್ತದೆ.

ಸದರಿ ಸಾಮಗ್ರಿಗಳು ಪ್ರತಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಮುಂದಿನ 1 ರಿಂದ 2 ದಿನಗಳ ಒಳಗಾಗಿ ತಲುಪಲಿದ್ದು, ಅಲ್ಲಿಂದ ಪ್ರತಿ ಶಾಲೆಗೆ ವಿತರಣೆ ಆಗಬೇಕಾಗಿರುತ್ತದೆ. ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಹಂತದಲ್ಲಿ ಈ ಕೆಳಕಾಣಿಸಿದ ಪೂರ್ವ ಸಿದ್ದತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1. ಸರಬರಾಜುದಾರರಿಂದ ಸ್ವೀಕೃತವಾಗುವ ಶೂ-ಸಾಕ್ಸ್/ಪಾದರಕ್ಷೆಗಳನ್ನು ದಾಸ್ತಾನು ಇಡುವ ಸಲುವಾಗಿ ಹಾಗೂ ಸ್ವೀಕೃತವಾದ ಶೂ-ಸಾಕ್ಸ್/ಪಾದರಕ್ಷೆಗಳನ್ನು ಶಾಲಾವಾರು ಅಳತೆಗೆ ಅನುಗುಣವಾಗಿ ವಿಗಂಡಿಸಲು ಅನುಕೂಲವಾಗುವಂತಹ ಒಂದು ಅಥವಾ ಅವಶ್ಯಕತೆಗೆ ತಕ್ಕಂತೆ ಸ್ಥಳಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯ ವ್ಯಾಪ್ತಿಯಲ್ಲಿ ಗುರುತಿಸುವುದು ಹಾಗೂ ಈ ಕಾರ್ಯಕ್ಕೆ ಅನುಕೂಲವಾಗುವಂತೆ ಸ್ಥಳವನ್ನು ಇಲಿಗಳು ಮತ್ತು ಗೆದ್ದಲುಗಳು, ಹುಳ ಹುಪ್ಪಟ್ಟೆಗಳು ಬಾರದಂತೆ, ಸ್ವಚ್ಛಗೊಳಿಸಿ ಎಲ್ಲಾ ಮುಂಜಾಗೃತಾ ಕ್ರಮಗಳೊಂದಿಗೆ ಸ್ಥಳವಾಕಾಶವನ್ನು ಸಿದ್ದಪಡಿಸಿಕೊಳ್ಳುವುದು ಹಾಗೂ ಮಳೆ ನೀರು ಸೋರದಂತೆ/ ದಾಸ್ತಾನು ಈಟ್ಟಿರುವ ಜಾಗದಲ್ಲಿ ನುಗ್ಗದಂತೆ ಮುಂಜಾಗ್ರತೆ ವಹಿಸುವುದು.

2. ಮೇಲಿನಂತೆ ಸಿದ್ದಪಡಿಸಿಕೊಳ್ಳಲಾದ ಸ್ಥಳದ ವಿವರಗಳನ್ನು ತಮ್ಮ ಕ್ಷೇತ್ರಕ್ಕೆ ಸರಬರಾಜು ಮಾಡುವ ಸರಬರಾಜುದಾರರಿಗೆ ಸರಬರಾಜು ಪೂರ್ವ ತಿಳಿಯಪಡಿಸುವುದು.

3. ದಾಸ್ತಾನಾದ ಶೂ-ಸಾಕ್ಸ್/ಪಾದರಕ್ಷೆಗಳನ್ನು ಶಾಲಾವಾರು ಹಾಗೂ ವಿದ್ಯಾರ್ಥಿಗಳ ತರಗತಿವಾರು, ಅಳತೆವಾರು ವಿಂಗಡಿಸಿ ಪ್ಯಾಕಿಂಗ್ ಮಾಡಲು ಅನುವಾಗುವಂತೆ ಸರಬರಾಜುದಾರರಿಗೆ ಸೂಕ್ತ ಸ್ಥಳ ವ್ಯವಸ್ಥೆಯನ್ನು ಮಾಡಿಕೊಡುವುದು.

4. ಶೂ-ಸಾಕ್ಸ್/ಪಾದರಕ್ಷೆಗಳನ್ನು ಶಾಲೆಗಳಿಗೆ ವಿತರಿಸುವ ಸಂಬಂಧ ಅವಶ್ಯಕತೆಗೆ ಅನುಗುಣವಾಗಿ ಶಾಲಾವಾರು/ಅಳತೆವಾರು ಶೂ-ಸಾಕ್ಸ್/ಪಾದರಕ್ಷೆಗಳನ್ನು ಶಾಲೆಗಳಿಗೆ ವಿತರಿಸಲು ವೇಳಾಪಟ್ಟಿಯನ್ನು ಸಿದ್ಧಪಡಿಸಿ ಅದರಂತೆ ವಿತರಣೆಗೆ ಕ್ರಮವಹಿಸುವುದು.

5. ಸದರಿ ಶೂ-ಸಾಕ್ಸ್/ಪಾದರಕ್ಷೆಗಳನ್ನು ಶಾಲೆಗಳಿಗೆ ವಿತರಿಸುವ ಸಂಬಂಧ ಶಾಲಾವಾರು ವಿತರಣಾ ಮಾರ್ಗಸೂಚಿಯನ್ನು (School wise route map) ಅನ್ನು ಸಿದ್ದಪಡಿಸಿ ಶಾಲೆಗಳಿಗೆ ತಿಳಿಯಪಡಿಸುವುದು.

6. ಶಾಲೆಗಳಿಗೆ ಶೂ-ಸಾಕ್ಸ್/ಪಾದರಕ್ಷೆಗಳು ತಲುಪಿದ ಕೂಡಲೇ ಅದನ್ನು ವಿಳಂಬವಿಲ್ಲದೆ ವಿದ್ಯಾರ್ಥಿಗಳಿಗೆ ವಿತರಿಸುವ ಬಗ್ಗೆ ಸೂಕ್ತ ಮಾರ್ಗಸೂಚಿಯನ್ನು ತಮ್ಮ ಹಂತದಲ್ಲಿ ತಮ್ಮ ತಾಲ್ಲೂಕಿಗೆ ಅನುಗುಣವಾಗಿ ಹೊರಡಿಸುವುದು.

7. ಮೇಲ್ಕಾಣಿಸಿದ ಎಲ್ಲಾ ಕಾರ್ಯಗಳು ಸುಗಮವಾಗಿ ಹಾಗೂ ಸುಸೂತ್ರವಾಗಿ ವಿರ್ವಹಿಸಲು ಅನುವಾಗುವಂತೆ ತಮ್ಮ ಕಚೇರಿ ಹಂತದಲ್ಲಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿ ಸದರಿ ಕಾರ್ಯಗಳ ಮೇಲುಸ್ತುವಾರಿ ಜವಾಬ್ದಾರಿಯನ್ನು ನೀಡುವುದು. (ಶೂ-ಸಾಕ್ಸ್ ಮತ್ತು ಸ್ಯಾಂಡಲ್‌ ಗಳಿಗೆ ಸಂಬಂಧಿಸಿದಂತೆ Specification ಗಳನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಮತ್ತು ಇ-ಮೇಲ್ ಮೂಲಕ ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಲಾಗಿದೆ)

8. ಶೂ-ಸಾಕ್ಸ್/ಪಾದರಕ್ಷೆಗಳನ್ನು ಶಾಲೆಗಳಿಗೆ ವಿತರಿಸಿದ ನಂತರ ವಿದ್ಯಾರ್ಥಿಗಳಿಂದ/ಶಾಲೆಗಳಿಂದ ಅಳತೆ ಸಂಬಂಧ ಯಾವುದೇ ವ್ಯತ್ಯಾಸಗಳು ಕಂಡುಬಂದಲ್ಲಿ ಸದರಿ ವ್ಯತ್ಯಾಸಗಳನ್ನು ತಮ್ಮ ಹಂತದಲ್ಲಿಯೇ ಲಭ್ಯವಿರುವ ದಾಸ್ತಾನಿನಲ್ಲಿ ಇತ್ಯರ್ಥಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ವಿತರಣೆಯ ನಂತರ ವರದಿಯನ್ನು ಸಲ್ಲಿಸುವುದು.

9. ಯಾವುದೇ ಸಮಸ್ಯೆಗಳು ಉದ್ಭವಿಸಿದ್ದಲ್ಲಿ, ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು(ಆಡಳಿತ) ಹಾಗೂ ನಿರ್ದೇಶಕರು (ಅಲ್ಪಸಂಖ್ಯಾತ ಭಾಷಾ ಶಾಲೆಗಳು) ರವರ ಗಮನಕ್ಕೆ ವಿಳಂಬಕ್ಕೆ ಆಸ್ಪದ ನೀಡದೇ ತರುವುದು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular