HomeLatest NewsBIG NEWS: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

BIG NEWS: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಕಲಬುರಗಿ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ನವರ ಹಾವಳಿ ಇನ್ನೂ ನಿಂತಿಲ್ಲ. ಮೈಕ್ರೋ ಫೈನಾಅನ್ಸ್ ಕಿರುಕುಳಕ್ಕೆ ನೊಂದು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಾತನೂರು ಗ್ರಾಮದಲ್ಲಿ ನಡೆದಿದೆ.

ನಾಗೇಶ್ ರೂಗಿ (50) ಮೃತ ದುರ್ದೈವಿ. ಹಿಂದೂಜಾ ಮೈಕ್ರೋ ಫೈನಾನ್ಸ್ ನಲ್ಲಿ ನಾಗೇಶ್ 5 ಲಕ್ಷ ಸಾಅಲ ಪಡೆದಿದ್ದರು. 1 ಲಕ್ಷ 50 ಸಾವಿರ ರೂಪಾಯಿ ಬಾಕಿ ಇತ್ತು. ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮನೆಗೆ ಬಂದು ಪದೇ ಪದೇ ಕಿರುಕುಳ ನೀಡುತ್ತಿದ್ದರಂತೆ. ಅಲ್ಲದೇ ಮನೆಯ ಗೋಡೆಗೆ ಮನೆ ಮಾರಾಟಕ್ಕಿದೆ ಎಂದು ಬರೆದು ಹೋಗಿದ್ದರಂತೆ. ಇದರಿಂದ ಬೇಸತ್ತ ನಾಗೇಶ್, ಮನೆಯಲ್ಲಿದ್ದ ನಿದ್ರೆ ಮಾಅತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೆಲೋಗಿ ಪೊಲೀಸ್ ಠಾಣೆ ವ್ಯಾಅಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular