HomeKarnatakaವೈದ್ಯಕೀಯ ಸೀಟು ಹಂಚಿಕೆ: ರಾಜ್ಯದಲ್ಲಿ ನೀಟ್ ವ್ಯವಸ್ಥೆ ರದ್ದು ಮಾಡಲ್ಲ: ಸಚಿವರ ಸ್ಪಷ್ಟನೆ

ವೈದ್ಯಕೀಯ ಸೀಟು ಹಂಚಿಕೆ: ರಾಜ್ಯದಲ್ಲಿ ನೀಟ್ ವ್ಯವಸ್ಥೆ ರದ್ದು ಮಾಡಲ್ಲ: ಸಚಿವರ ಸ್ಪಷ್ಟನೆ

ಬೆಂಗಳೂರು: ವೈದ್ಯಕೀಯ ಸೀಟು ಹಂಚಿಕೆಯಲ್ಲಿ ರಾಜ್ಯದಲ್ಲಿ ನೀಟ್ ವ್ಯವಸ್ಥೆ ರದ್ದು ಮಾಡುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ. ನೀಟ್ ವ್ಯವಸ್ಥೆ ಬಂದಿರುವುದರಿಂದ ರಾಜ್ಯದ ವೈದ್ಯಕೀಯ ಸೀಟು ಕಡಿಮೆಯಾಗಿಲ್ಲ. ಸರ್ಕಾರಿ ಸೀಟು ಹಾಗೂ ಖಾಸಗಿ ಸೀಟುಗಳು ಹಾಗೆಯೇ ಇವೆ. ಶೇಕಡ 15 ರಷ್ಟು ಆಲ್ ಇಂಡಿಯಾ ಕೋಟಾ ಸೀಟು ಇದ್ದು, ಶೇಕಡ 85ರಷ್ಟು ನಮ್ಮ ಮಕ್ಕಳಿಗೆ ಸಿಗಲಿದೆ. ಖಾಸಗಿ ಕಾಲೇಜುಗಳಲ್ಲಿ ಶೇಕಡ 40ರಷ್ಟು ಮೆಡಿಕಲ್ ಸೀಟುಗಳು ನಮ್ಮ ರಾಜ್ಯಕ್ಕೆ ಸಿಗಲಿದೆ. ಆಲ್ ಇಂಡಿಯಾ ಕೋಟಾ ಮತ್ತು ಡೀಮ್ಡ್ ವಿವಿ ಸೀಟು ಮಾತ್ರ ಎಂಸಿಐ ಯಿಂದ ಹಂಚಿಕೆ ಮಾಡಲಾಗುತ್ತದೆ. ರಾಜ್ಯದ ವೈದ್ಯಕೀಯ ಸೀಟು ಭರ್ತಿಗೆ ರಾಜ್ಯಕ್ಕೆ ಅಧಿಕಾರ ನೀಡಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ನೀಟ್ ರದ್ದು ಮಾಡುವ ಪ್ರಶ್ನೆಯೇ ಇಲ್ಲ. ಸುಪ್ರೀಂ ಕೋರ್ಟ್ ಆದೇಶವೂ ಇದೆ. ಸಂಸತ್ತಿನಲ್ಲಿ ಕಾಯ್ದೆ ಕೂಡ ಆಗಿದೆ. ರಾಜ್ಯದಲ್ಲಿ ನೀಟ್ ವ್ಯವಸ್ಥೆಯನ್ನು ರದ್ದು ಮಾಡುವುದಿಲ್ಲ. ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೀಟ್ ಪರೀಕ್ಷೆ ಬಗ್ಗೆ ಗ್ರಾಮೀಣ ಮಕ್ಕಳಿಗೆ ಸಮಸ್ಯೆ ಆಗುತ್ತಿರುವುದರಿಂದ ಪ್ರತಿ ವರ್ಷ 25000 ಮಕ್ಕಳಿಗೆ ಶಾಲಾ ಶಿಕ್ಷಣ ಇಲಾಖೆ ಕೋಚಿಂಗ್ ನೀಡುತ್ತಿದೆ. ವೈದ್ಯಕೀಯ ಸೀಟಿನಲ್ಲಿ ಶೇಕಡ 15ರಷ್ಟು ಗ್ರಾಮೀಣ ಮಕ್ಕಳಿಗೆ ಮೀಸಲಾತಿ ಇದೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular