HomeLive News‘ಆನ್‌ಲೈನ್ ಗೇಮ್’ ಚಟಕ್ಕೆ ಬೀದರ್'ನಲ್ಲಿ MBBS ವಿದ್ಯಾರ್ಥಿ ಬಲಿ ! ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

‘ಆನ್‌ಲೈನ್ ಗೇಮ್’ ಚಟಕ್ಕೆ ಬೀದರ್’ನಲ್ಲಿ MBBS ವಿದ್ಯಾರ್ಥಿ ಬಲಿ ! ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಬೀದರ್ : ಜಿಲ್ಲೆಯ ಬ್ರಿಮ್ಸ್ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಮನನೊಂದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

 ಬಡತನದ ನಡುವೆಯೂ ವೈದ್ಯನಾಗಬೇಕೆಂಬ ಕನಸು ಹೊತ್ತಿದ್ದ ಮಗ, ಕೇವಲ 80 ಸಾವಿರ ರೂಪಾಯಿಗಾಗಿ ಈ ನಿರ್ಧಾರ ಕೈಗೊಂಡಿರುವುದು ಕುಟುಂಬವನ್ನು ಕಣ್ಣೀರಲ್ಲಿ ಮುಳುಗಿಸಿದೆ. ಆನ್‌ಲೈನ್ ಗೇಮಿಂಗ್ ಚಟ ಯುವ ಪೀಳಿಗೆಯನ್ನು ಹೇಗೆ ಬಲಿಪಡೆಯುತ್ತಿದೆ ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ.

ಏನಿದು ಘಟನೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೀದರ್‌ನ ಬ್ರಿಮ್ಸ್ (BRIMS) ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಆವಿಷ್ಕಾರ ಚವ್ಹಾಣ್ (21), ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಕಾರಣಕ್ಕೆ ವಸತಿ ನಿಲಯದ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಆವಿಷ್ಕಾರ ಆನ್‌ಲೈನ್ ಗೇಮ್‌ನಲ್ಲಿ ಸುಮಾರು 80,000 ರೂಪಾಯಿಗಳನ್ನು ಕಳೆದುಕೊಂಡಿದ್ದರು. ಅವರ ಮೊಬೈಲ್ ಮತ್ತು ವಾಟ್ಸಾಪ್ ಚಾಟ್‌ಗಳನ್ನು ಪರಿಶೀಲಿಸಿದಾಗ ಗೇಮ್‌ಗೆ ಸಂಬಂಧಿಸಿದ ಸಂಭಾಷಣೆಗಳು ಪತ್ತೆಯಾಗಿವೆ ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.

ತಂದೆಯ ಭಾವುಕ ಹೇಳಿಕೆ : ಮೃತರ ತಂದೆ ಶಾಮರಾವ್ ಚವ್ಹಾಣ್ ಅವರು ಅತೀವ ದುಃಖದಿಂದ ಪ್ರತಿಕ್ರಿಯಿಸಿದ್ದು, “ಬಹಳಷ್ಟು ಬಡತನದಲ್ಲಿ ಕಷ್ಟಪಟ್ಟು ಮೂವರು ಮಕ್ಕಳನ್ನು ಮೆಡಿಕಲ್ ಓದಿಸುತ್ತಿದ್ದೇನೆ. ಮಗ ಏನೇ ಇದ್ದರೂ ನಮಗೆ ಹೇಳುತ್ತಿದ್ದ, ಆದರೆ ಈ ಆನ್‌ಲೈನ್ ಗೇಮ್ ಬಗ್ಗೆ ನಮಗೆ ತಿಳಿಸಿರಲಿಲ್ಲ. ‘ಆನ್‌ಲೈನ್ ಗೇಮ್ ಆಡಬಾರದು’ ಎಂದು ಅವನೇ ನಮಗೆ ಹೇಳುತ್ತಿದ್ದ, ಈಗ ಅವನೇ ಈ ರೀತಿ ಮಾಡಿಕೊಂಡಿದ್ದಾನೆ” ಎಂದು ಕಣ್ಣೀರು ಹಾಕಿದ್ದಾರೆ. ಈ ಘಟನೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular