HomeHealthಮಾತ್ರೆಗಳ ಹಂಗಿಲ್ಲದೆ ಅಸಿಡಿಟಿ ಓಡಿಸಿ: ಎದೆಯುರಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗೆ ಏಮ್ಸ್‌ ವೈದ್ಯರು ನೀಡಿದ ಆ...

ಮಾತ್ರೆಗಳ ಹಂಗಿಲ್ಲದೆ ಅಸಿಡಿಟಿ ಓಡಿಸಿ: ಎದೆಯುರಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗೆ ಏಮ್ಸ್‌ ವೈದ್ಯರು ನೀಡಿದ ಆ ಒಂದೇ ಒಂದು ಸಲಹೆ ಇಲ್ಲಿದೆ ನೋಡಿ

ನವದೆಹಲಿ: ಅಸಿಡಿಟಿ ಅಥವಾ ಎದೆಯುರಿ ಎನ್ನುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದ್ದು, ಇದು ಸರಿಯಾದ ನಿದ್ದೆ ಮತ್ತು ನೆಮ್ಮದಿಯನ್ನು ಕೆಡಿಸುತ್ತದೆ. ಅನೇಕರು ಮಾತ್ರೆಗಳ ಮೊರೆ ಹೋದರೂ ತಾತ್ಕಾಲಿಕ ಪರಿಹಾರ ಮಾತ್ರ ಸಿಗುತ್ತದೆ. ಆದರೆ, ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್‌ನಲ್ಲಿ ತರಬೇತಿ ಪಡೆದ ಏಮ್ಸ್‌ನ ಮಾಜಿ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಠಿ ಅವರು ಅಸಿಡಿಟಿಯನ್ನು ಶಾಶ್ವತವಾಗಿ ಹೋಗಲಾಡಿಸಲು ಕೆಲವು ನೈಸರ್ಗಿಕ ಮತ್ತು ಪರಿಣಾಮಕಾರಿ ವಿಧಾನಗಳನ್ನು ಹಂಚಿಕೊಂಡಿದ್ದಾರೆ.

ಡಾ. ಸೇಠಿ ಅವರ ಪ್ರಕಾರ, ಅಸಿಡಿಟಿಯನ್ನು ಶಮನಗೊಳಿಸಲು ನೀವು ಮಾಡಬೇಕಾದ ಪ್ರಮುಖ ಬದಲಾವಣೆಗಳು ಇಲ್ಲಿವೆ:


ಅಸಿಡಿಟಿ ನಿವಾರಣೆಗೆ ವೈದ್ಯರ ಟಿಪ್ಸ್:

  • ಸೋಂಪು ಕಾಳುಗಳ ಜಾದೂ (Fennel Seeds): ಸೋಂಪು ಕಾಳುಗಳಲ್ಲಿ ‘ಅನೆಥೋಲ್’ ಎಂಬ ಸಂಯುಕ್ತವಿದ್ದು, ಇದು ಹೊಟ್ಟೆಯ ಉರಿಯನ್ನು ತಕ್ಷಣವೇ ಶಮನಗೊಳಿಸುತ್ತದೆ. ಇದರ ಆಂಟಿ-ಅಲ್ಸರ್ ಗುಣಲಕ್ಷಣಗಳು ಹೊಟ್ಟೆಯ ಒಳಪದರವನ್ನು ತಂಪಾಗಿಸುವುದಲ್ಲದೆ, ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
  • ಶುಂಠಿ ಟೀ (Ginger Tea): ಹೊಟ್ಟೆಯಲ್ಲಿ ಅತಿಯಾಗಿ ಗ್ಯಾಸ್ ತುಂಬಿಕೊಂಡಿದ್ದರೆ ಅಥವಾ ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದರೆ, ಒಂದು ಕಪ್ ಶುಂಠಿ ಟೀ ಕುಡಿಯುವುದು ಉತ್ತಮ ಪರಿಹಾರ ನೀಡುತ್ತದೆ.
  • ಕಲ್ಲಂಗಡಿ ಹಣ್ಣಿನ ಲಾಭ: ಕಲ್ಲಂಗಡಿ ಹಣ್ಣಿನಲ್ಲಿ ಶೇ. 90 ರಷ್ಟು ನೀರಿನಾಂಶವಿದ್ದು, ಇದು ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ಇದರಲ್ಲಿರುವ ಲೈಕೋಪೀನ್ ಅಂಶವು ಮಲಬದ್ಧತೆಯನ್ನು ದೂರವಿಡಲು ಮತ್ತು ಹೊಟ್ಟೆಯನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ.
  • ನೆನೆಸಿದ ಬಾದಾಮಿ: ಡ್ರೈ ಫ್ರೂಟ್ಸ್‌ಗಳಲ್ಲಿ ನೆನೆಸಿದ ಬಾದಾಮಿ (Soaked Almonds) ಅಸಿಡಿಟಿಗೆ ಅತ್ಯುತ್ತಮ ಮದ್ದು. ಇದು ಹೊಟ್ಟೆಯ ಆಮ್ಲೀಯತೆಯನ್ನು ಸಮತೋಲನಗೊಳಿಸುತ್ತದೆ.
  • ಮೊಟ್ಟೆ ಸೇವನೆ: ಅಸಿಡಿಟಿ ಇರುವಾಗಲೂ ಮೊಟ್ಟೆಗಳನ್ನು ಸೇವಿಸಬಹುದು ಎಂದು ಡಾಕ್ಟರ್ ಸ್ಪಷ್ಟಪಡಿಸಿದ್ದಾರೆ, ಇದು ಹೊಟ್ಟೆಗೆ ಸುರಕ್ಷಿತವಾಗಿದೆ.
View this post on Instagram

A post shared by Saurabh Sethi MD MPH | Gastroenterologist (@doctor.sethi)

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular