HomeLatest NewsBREAKING : ದೆಹಲಿಯಲ್ಲಿ ಬೃಹತ್ ಕಟ್ಟಡ ಕುಸಿತ, ಹಲವರು ಸಿಲುಕಿರುವ ಶಂಕೆ

BREAKING : ದೆಹಲಿಯಲ್ಲಿ ಬೃಹತ್ ಕಟ್ಟಡ ಕುಸಿತ, ಹಲವರು ಸಿಲುಕಿರುವ ಶಂಕೆ

ದೆಹಲಿಯ ಪ್ರೀತ್ ವಿಹಾರ್ ಪ್ರದೇಶದ ಹಳೆಯ ಜಲ ಮಂಡಳಿ (Water Board) ಕಚೇರಿಯ ಬಳಿ ಕಟ್ಟಡವೊಂದು ಕುಸಿದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಕಟ್ಟಡದಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಹಳೆಯ ಜಲ ಮಂಡಳಿ ಕಚೇರಿಯ ಫಾಲ್ಸ್ ಸೀಲಿಂಗ್ (False ceiling) ಕುಸಿದು ಬಿದ್ದಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ದೆಹಲಿಯಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಇಂತಹ ಹಲವು ಘಟನೆಗಳು ನಡೆದಿವೆ. ಜ್ವಾಲಾ ನಗರದಲ್ಲಿ ನಡೆದ ಕಟ್ಟಡ ಕುಸಿತದಲ್ಲಿ ನಾಲ್ವರು ಗಾಯಗೊಂಡಿದ್ದರು ಮತ್ತು ಜುಲೈನಲ್ಲಿ ವೆಲ್‌ಕಮ್ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದರು.

ಪ್ರೀತ್ ವಿಹಾರ್‌ನ ಹಳೆಯ ಜಲ ಮಂಡಳಿ (Water Board) ಕಚೇರಿಯ ಬಳಿ ಕಟ್ಟಡ ಕುಸಿತದ ಬಗ್ಗೆ ಅಗ್ನಿಶಾಮಕ ಇಲಾಖೆಗೆ ಕರೆ ಬಂದಿತ್ತು. ವರದಿಗಳ ಪ್ರಕಾರ, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ ಹಳೆಯ ಜಲ ಮಂಡಳಿ ಕಚೇರಿಯ ಫಾಲ್ಸ್ ಸೀಲಿಂಗ್ (False ceiling) ಕುಸಿದಿರುವುದು ಕಂಡುಬಂದಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಘಟನೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ಜುಲೈನಲ್ಲಿ ಈಶಾನ್ಯ ದೆಹಲಿಯ ವೆಲ್‌ಕಮ್ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಎರಡು ವರ್ಷದ ಮಗು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದರು. ಮೃತರನ್ನು ಕಟ್ಟಡದ ಮಾಲೀಕ ಅಬ್ದುಲ್ ಮತ್ಲೂಬ್ (50), ಅವರ ಪತ್ನಿ ರಾಬಿಯಾ (46), ಪುತ್ರರಾದ ಜಾವೇದ್ (23) ಮತ್ತು ಅಬ್ದುಲ್ಲಾ (15), ಪುತ್ರಿ ಜುಬಿಯಾ (27) ಮತ್ತು ಜುಬಿಯಾ ಅವರ ಮಗಳು ಫೌಜಿಯಾ (2) ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಇತರ ಎಂಟು ಮಂದಿ ಗಾಯಗೊಂಡಿದ್ದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular