HomeKarnatakaರಾಜಿ ಸಂಧಾನಕ್ಕೆ ಸಮಾಜ ಸೇವಕಿ ಮೊರೆ ಹೋದ ಪತ್ನಿಗೆ ಬಿಗ್ ಶಾಕ್: ದಂಪತಿ ಕಲಹ ಬಿಡಿಸಲು...

ರಾಜಿ ಸಂಧಾನಕ್ಕೆ ಸಮಾಜ ಸೇವಕಿ ಮೊರೆ ಹೋದ ಪತ್ನಿಗೆ ಬಿಗ್ ಶಾಕ್: ದಂಪತಿ ಕಲಹ ಬಿಡಿಸಲು ಬಂದ ಮಹಿಳೆಯೇ ಮದುವೆಯಾದಳು

ಬೆಳಗಾವಿ: ದಂಪತಿ ಕಲಹ ಬಿಡಿಸಲು ಬಂದ ಸಮಾಜ ಸೇವಕಿ ಸಂಧಾನ ನಡೆಸುವ ಬದಲು ತಾನೇ ಮದುವೆಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ವಿಚ್ಛೇದನ ಕೊಡದೆ ಮರು ಮದುವೆಯಾದ ಗಂಡನ ವಿರುದ್ಧ ಪತ್ನಿ ದೂರು ನೀಡಿದ್ದಾರೆ. ಸರ್ಕಾರಿ ಉದ್ಯೋಗಿಯಾಗಿರುವ ಪತಿ ಮತ್ತು ಅವರ ಪತ್ನಿ ಮದುವೆಯಾಗಿ 23 ವರ್ಷವಾಗಿದ್ದು, ಇಬ್ಬರು ಪುತ್ರರಿದ್ದಾರೆ. ಆಗಾಗ ಸಂಸಾರದಲ್ಲಿ ಕಲಹ ನಡೆಯುತ್ತಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದಕ್ಕಾಗಿ ಪತ್ನಿ ಬೆಳಗಾವಿಯ ಸಮಾಜ ಸೇವಕಿಯೊಬ್ಬರ ಮೊರೆ ಹೋಗಿದ್ದಾರೆ. ರಾಜಿ ಸಂಧಾನ ಮಾಡಲು ಬಂದ ಸಮಾಜ ಸೇವಕಿ ಮಹಿಳೆಯ ಪತಿಯನ್ನೇ ಮದುವೆಯಾಗಿದ್ದಾರೆ. ಮದುವೆಯಾಗುವ ಮೊದಲು ವಿಚ್ಛೇದನ ನೀಡಿಲ್ಲ. ಅನುಮತಿ ಕೂಡ ಪಡೆದಿಲ್ಲ ಎಂದು ಆರೋಪಿಸಿ ನೊಂದ ಪತ್ನಿ ಬೆಳಗಾವಿ ಮಹಿಳಾ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular