HomeLatest Newsಲಿಂಗ ಪರಿವರ್ತಿತ ಕ್ರಿಕೆಟರ್‌ಗೆ ಅವಕಾಶ: ಆಸ್ಟ್ರೇಲಿಯಾ ಮಂಡಳಿ ತೀರ್ಮಾನಕ್ಕೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಮರಿಝಾನ್ ಕಪ್!

ಲಿಂಗ ಪರಿವರ್ತಿತ ಕ್ರಿಕೆಟರ್‌ಗೆ ಅವಕಾಶ: ಆಸ್ಟ್ರೇಲಿಯಾ ಮಂಡಳಿ ತೀರ್ಮಾನಕ್ಕೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಮರಿಝಾನ್ ಕಪ್!

ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್‌ನಲ್ಲಿ ಲಿಂಗ ಪರಿವರ್ತಿತ ಆಟಗಾರ್ತಿ ಅನಯಾ ಬಂಗಾರ್ ಅವರಿಗೆ ಆಡಲು ಅವಕಾಶ ನೀಡಿರುವುದಕ್ಕೆ ದಕ್ಷಿಣ ಆಫ್ರಿಕಾದ ಹಿರಿಯ ಆಟಗಾರ್ತಿ ಮರಿಝಾನ್ ಕಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಕಟುವಾಗಿ ಟೀಕಿಸಿರುವ ಕಪ್, ಇಂತಹ ನಿರ್ಧಾರಗಳಿಗೆ ಎಂದಿಗೂ ಅವಕಾಶ ನೀಡಬಾರದು ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ತರಬೇತುದಾರ ಸಂಜಯ್ ಬಂಗಾರ್ ಅವರ ಮಗಳಾದ ಅನಯಾ ಬಂಗಾರ್, 2026ರ ಮಾರ್ಚ್‌ನಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಇದಕ್ಕೂ ಮುನ್ನ ಮುಂಬೈ ಅಂಡರ್-19 ತಂಡದಲ್ಲಿ ಪುರುಷರ ಕ್ರಿಕೆಟ್ ಆಡಿದ್ದ ಅನಯಾ, ಆಸ್ಟ್ರೇಲಿಯಾದ ಕಮ್ಯುನಿಟಿ ಕ್ರಿಕೆಟ್‌ನಲ್ಲಿ ಆಡಲು ಕ್ರಿಕೆಟ್ ಆಸ್ಟ್ರೇಲಿಯಾದಿಂದ ಅರ್ಹತಾ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ.

ಈ ಬೆಳವಣಿಗೆಯ ಬೆನ್ನಲ್ಲೇ ಕ್ರೀಡಾಲೋಕದಲ್ಲಿ ಹೊಸ ಚರ್ಚೆ ಆರಂಭವಾಗಿದೆ. ಪ್ರಮುಖವಾಗಿ ಮಹಿಳಾ ಬಿಗ್ ಬ್ಯಾಶ್ ಲೀಗ್ ನಂತಹ ಉನ್ನತ ಮಟ್ಟದ ಲೀಗ್‌ಗಳಲ್ಲಿ ಅವಕಾಶ ಸಿಗುವ ಮುನ್ನವೇ ಈ ತೀರ್ಮಾನದ ವಿರುದ್ಧ ಕ್ರೀಡಾಪಟುಗಳು ಧ್ವನಿ ಎತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಪುರುಷರ ಹಂತದಲ್ಲಿ ಬೆಳವಣಿಗೆ ಕಂಡ ಲಿಂಗ ಪರಿವರ್ತಿತರಿಗೆ ಮಹಿಳಾ ಕ್ರಿಕೆಟ್‌ನಲ್ಲಿ ಅವಕಾಶ ನೀಡಬಾರದು ಎಂಬ ನಿಯಮವನ್ನು ಹೊಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಈ ಸಡಿಲಿಕೆಯು ಮಹಿಳಾ ಕ್ರಿಕೆಟ್‌ನಲ್ಲಿ ಸಮಾನ ಸ್ಪರ್ಧೆಗೆ ಧಕ್ಕೆ ತರುತ್ತದೆ ಎಂಬ ವಾದಗಳು ಕೇಳಿಬರುತ್ತಿವೆ. ಮರಿಝಾನ್ ಕಪ್ ಅವರ ಈ ಹೇಳಿಕೆಯು ಕ್ರೀಡಾ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

“>

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular