HomeBusinessಚಿನ್ನ-ಬೆಳ್ಳಿ ಬೆಲೆ ದಿಢೀರ್ ಕುಸಿತ: 10 ಗ್ರಾಂ ಗೋಲ್ಡ್‌ ₹3,260, ಕೆಜಿ ಸಿಲ್ವರ್‌ ₹5,000 ಇಳಿಕೆ

ಚಿನ್ನ-ಬೆಳ್ಳಿ ಬೆಲೆ ದಿಢೀರ್ ಕುಸಿತ: 10 ಗ್ರಾಂ ಗೋಲ್ಡ್‌ ₹3,260, ಕೆಜಿ ಸಿಲ್ವರ್‌ ₹5,000 ಇಳಿಕೆ

ನವದೆಹಲಿ: ದೇಶೀಯ ಆಭರಣ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಇಳಿಕೆ ಪರ್ವ ಮುಂದುವರಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಚೇತರಿಸಿಕೊಂಡ ಬೆನ್ನಲ್ಲೇ, ಇಂದು (ಆಗಸ್ಟ್ 28, ಶುಕ್ರವಾರ) ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡಿದೆ.

ನಿನ್ನೆ ಪ್ರತಿ ಗ್ರಾಮ್‌ಗೆ ₹70 ಇಳಿಕೆಯಾಗಿದ್ದ ಬಂಗಾರದ ದರ, ಇಂದು ಬರೋಬ್ಬರಿ ₹290 ರಷ್ಟು ತಗ್ಗಿದೆ. ಇದರಿಂದಾಗಿ 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ ಮತ್ತೆ ₹16,000 ಗಡಿಯಿಂದ ಕೆಳಕ್ಕಿಳಿದಿದ್ದರೆ, 18 ಕ್ಯಾರಟ್ ಚಿನ್ನದ ದರ ₹12,000 ಕ್ಕಿಂತ ಕಡಿಮೆಯಾಗಿದೆ. ಇತ್ತ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಬೆಳ್ಳಿ ಬೆಲೆಯಲ್ಲೂ ಇಂದು ಗ್ರಾಮ್‌ಗೆ ₹5 ಇಳಿಕೆಯಾಗಿದೆ.

ಇಂದಿನ ಚಿನ್ನ ಮತ್ತು ಬೆಳ್ಳಿ ದರ ವಿವರ (ಆಗಸ್ಟ್ 28):

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

24 ಕ್ಯಾರಟ್ (ಅಪರಂಜಿ ಚಿನ್ನ): 1 ಗ್ರಾಮ್‌ಗೆ ₹15,982 (10 ಗ್ರಾಮ್‌ಗೆ ₹1,59,820)

22 ಕ್ಯಾರಟ್ (ಆಭರಣ ಚಿನ್ನ): 1 ಗ್ರಾಮ್‌ಗೆ ₹14,650 (10 ಗ್ರಾಮ್‌ಗೆ ₹1,46,500)

ಬೆಳ್ಳಿ ದರ: 1 ಗ್ರಾಮ್‌ಗೆ ₹255 (100 ಗ್ರಾಮ್‌ಗೆ ₹25,500)

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

​ನಗರಗಳ ಹೆಸರು ​ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ₹1,59,820

ನಾಗ್ಪುರ ₹1,59,820

ಮುಂಬೈ ₹1,59,820

ಚೆನ್ನೈ ₹1,59,820

ಕೋಲ್ಕತ್ತಾ ₹1,59,820

ಪಾಟ್ನಾ ₹1,59,870

ಸೂರತ್‌ ₹1,59,870

ಚಂಡೀಗಢ ₹1,59,870

ಲಕ್ನೋ ₹1,59,870

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular