HomeKarnatakaBig News: ಮಂಗಳೂರು ನಗರದಲ್ಲಿ ಖಾಸಗಿ ಎಲೆಕ್ಟ್ರಿಕ್ ಸಿಟಿ ಬಸ್ ಸಂಚಾರ

Big News: ಮಂಗಳೂರು ನಗರದಲ್ಲಿ ಖಾಸಗಿ ಎಲೆಕ್ಟ್ರಿಕ್ ಸಿಟಿ ಬಸ್ ಸಂಚಾರ

ಮಂಗಳೂರು ನಗರಕ್ಕೆ ಮೊದಲ ಎಲೆಕ್ಟ್ರಿಕ್ ಸಿಟಿ ಬಸ್ ಸೇವೆ ಸಿಕ್ಕಿದೆ. ಹೌದು ಖಾಸಗಿ ಬಸ್‌ ಕಂಪನಿಯೊಂದು ಫೆಬ್ರವರಿ 26ರಂದು ನಗರ ಸಾರಿಗೆ ಸೇವೆಗೆ ಎಲೆಕ್ಟ್ರಿಕ್ ಬಸ್ ಸೇರ್ಪಡೆ ಮಾಡಿದೆ.

ಗಣೇಶ್ ಪ್ರಸಾದ್ ಟ್ರಾವೆಲ್ಸ್ ಎಂಬ ಕಂಪನಿ ಮಂಗಳೂರು ನಗರದ ಸಿಟಿ ಬಸ್ ಸೇವೆಗೆ ಎಲೆಕ್ಟ್ರಿಕ್ ಬಸ್ ನಿಯೋಜನೆ ಮಾಡಿದೆ. ಗುರುವಾರ ಬಸ್‌ ಉದ್ಘಾಟನೆಗೊಂಡಿದ್ದು, ಕೆಲವೇ ದಿನಗಳಲ್ಲಿ ಸಂಚಾರ ಆರಂಭಿಸಲಿದೆ.

ಮಂಗಳೂರು ನಗರದ ಪ್ರಮುಖ ಮಾರ್ಗ ರೂಟ್ ನಂಬರ್ 27 (ಮಂಗಳಾದೇವಿ-ಸ್ಟೇಟ್‌ ಬ್ಯಾಂಕ್-ಮಂಗಳಾದೇವಿ)ರಲ್ಲಿ ಈ ಎಲೆಕ್ಟ್ರಿಕ್ ಬಸ್ ಸಂಚಾರವನ್ನು ನಡೆಸಲಿದೆ. ಈ ಮೂಲಕ ಮಂಗಳೂರು ನಗರದ ನಗರ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಣೇಶ್ ಪ್ರಸಾದ್ ಟ್ರಾವೆಲ್ಸ್ ಮಾಲೀಕರು ದಿಲ್‌ರಾಜ್ ಆಳ್ವಾ. ಪುಣೆ ಮೂಲದ ನ್ಯೂಟನ್ ಆಟೋ ಕಂಪನಿ ಮೂಲಕ ಎಲೆಕ್ಟ್ರಿಕ್ ಬಸ್ ಖರೀದಿ ಮಾಡುತ್ತಿದ್ದಾರೆ. 9 ಮೀಟರ್ ಉದ್ದದ ಬಸ್ 32 ಆಸನಗಳನ್ನು ಒಳಗೊಂಡಿದೆ.

ನ್ಯೂಟರ್ ಆಟೋ ಕಂಪನಿ ತಯಾರು ಮಾಡಿರುವ ಮೊದಲ ಎಲೆಕ್ಟ್ರಿಕ್ ಬಸ್ ಇದಾಗಿದ್ದು, ಇದು ಮಂಗಳೂರು ನಗರದ ಮೊದಲ ನಗರ ಸಾರಿಗೆ ಖಾಸಗಿ ಬಸ್ ಆಗಿ ಸಂಚಾರವನ್ನು ನಡೆಸಲಿದೆ.

ನೋಂದಣಿ ಪ್ರಕ್ರಿಯೆಗಳೆಲ್ಲ ಪೂರ್ಣಗೊಂಡ ಬಳಿಕ ಮಂಗಳೂರು ನಗರದಲ್ಲಿ ಈ ಬಸ್‌ಗಳು ಸಂಚಾರವನ್ನು ಆರಂಭಿಸಲಿದೆ. ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದ ಬಸ್ 200 ಕಿ.ಮೀ. ತನಕ ಸಂಚಾರವನ್ನು ನಡೆಸಲಿದೆ.

ಬಸ್ ಸೂಪರ್ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಕೇವಲ 2 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ. ಸ್ಲೋ ಚಾರ್ಜಿಂಗ್ ಮಾಡಿದರೆ 5 ಗಂಟೆಗಳ ಕಾಲ ಬೇಕಿದೆ ಎಂದು ಬಸ್‌ ಕುರಿತು ಮಾಹಿತಿ ನೀಡಿದ್ದಾರೆ.

ಸದ್ಯಕ್ಕೆ ಒಂದೇ ಬಸ್ ಮೂಲಕ ನಗರದಲ್ಲಿ ಸಂಚಾರ ಆರಂಭಿಸಲಾಗುತ್ತದೆ. ಆದ್ದರಿಂದ ಪ್ರತ್ಯೇಕ ಚಾರ್ಜಿಂಗ್ ಸ್ಟೇಷನ್ ಆರಂಭಿಸುವುದಿಲ್ಲ ಎಂದು ಮಾಲೀಕರು ಹೇಳಿದ್ದಾರೆ. ಮಂಗಳೂರು ನಗರದ ಪೆಟ್ರೋಲ್ ಬಂಕ್‌ಗಳಲ್ಲಿರುವ ಚಾರ್ಜಿಂಗ್ ವ್ಯವಸ್ಥೆ ಮೂಲಕ ಸದ್ಯಕ್ಕೆ ಬಸ್ ಚಾರ್ಜ್ ಮಾಡಲಾಗುತ್ತದೆ.

ಮಂಗಳೂರು ನಗರದಲ್ಲಿ ಸಿಟಿ ಬಸ್ ಸೇವೆ ನೀಡುವ ಗಣೇಶ್ ಪ್ರಸಾದ್ ಟ್ರಾವೆಲ್ಸ್ 5 ಬಸ್‌ಗಳನ್ನು ಹೊಂದಿದೆ. ಒಂದು ಬಸ್ ಹಳೆಯದಾಗಿತ್ತು. ಆ ಬಸ್ ಬದಲು ಎಲೆಕ್ಟ್ರಿಕ್ ಬಸ್‌ ಅನ್ನು ಒಂದು ಮಾರ್ಗದಲ್ಲಿ ಓಡಿಸಲು ತೀರ್ಮಾನಿಸಲಾಗಿದೆ.

ಮುಂದಿನ ದಿನಗಳಲ್ಲಿ ಗಣೇಶ್ ಪ್ರಸಾದ್ ಟ್ರಾವೆಲ್ಸ್ ಎಲ್ಲಾ ಬಸ್‌ಗಳನ್ನು ಎಲೆಕ್ಟ್ರಿಕ್ ಬಸ್ ಆಗಿ ಪರಿವರ್ತಿಸುವ ಗುರಿ ಹೊಂದಿದೆ. ಇದಕ್ಕಾಗಿಯೇ ಸಮಾನ ಮನಸ್ಕರ ಜೊತೆ ಸೇರಿ ಕಂಪನಿಯನ್ನು ಸಹ ಪ್ರಾರಂಭಿಸುತ್ತಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular