HomeKarnatakaಬೇಸಿಗೆ ಆರಂಭದಲ್ಲೇ ಬೆಂಗಳೂರಿಗರಿಗೆ ಬಿಗ್ ಶಾಕ್: 142 ಕೆರೆಗಳ ನೀರು ಕುಡಿಯಲು ಯೋಗ್ಯವಲ್ಲ: ಮಾಲಿನ್ಯ ನಿಯಂತ್ರಣ...

ಬೇಸಿಗೆ ಆರಂಭದಲ್ಲೇ ಬೆಂಗಳೂರಿಗರಿಗೆ ಬಿಗ್ ಶಾಕ್: 142 ಕೆರೆಗಳ ನೀರು ಕುಡಿಯಲು ಯೋಗ್ಯವಲ್ಲ: ಮಾಲಿನ್ಯ ನಿಯಂತ್ರಣ ಮಂಡಳಿ ವರದಿ

ಬೆಂಗಳೂರು: ಬೆಸಿಗೆ ಆರಂಭದಲ್ಲಿಯೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜಲಾಘಾತದ ಭೀತಿ ಎದುರಾಗಿದೆ. ಈ ಬಾರಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಹಾಹಾಕರ ಶುರುವಾಗುವ ಸಾಧ್ಯತೆ ದಟ್ಟವಾಗಿದೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ವರದಿಯೊಂದು ಆತಂಕ ಸೃಷ್ಟಿಸುವಂತಿದೆ. ಬೆಂಗಳೂರು ನಗರದ 142 ಕೆರೆಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ತಿಳಿದುಬಂದಿದೆ. ಈ ಕೆರೆಗಳಲ್ಲಿ 50 ಕೆರೆಗಳು ಡಿ ವರ್ಗದಲ್ಲಿದ್ದರೆ, ಉಳಿದ 92 ಕೆರೆಗಳು ಇ ವರ್ಗದಲ್ಲಿವೆ. ಇ ವರ್ಗವೆಂದರೆ ಅತ್ಯಂತ ಕಳಪೆ ಗುಣಮಟ್ಟದ ನೀರನ್ನು ಹೊಂದಿದ್ದು, ಸಂಸ್ಕರಿಸಿದ ನಂತರವೂ ಕುಡಿಯಲು ಯೋಗ್ಯವಲ್ಲ ಎಂದು ತಿಳಿಸಿದೆ.

ಮೋರಿ ನೀರು ಮತ್ತು ಕೈಗಾರಿಕಾ ತ್ಯಾಜ್ಯಗಳು ಕೆರೆಗಳ ಒಡಲು ಸೇರುತ್ತಿರುವುದೇ ನೀರು ಕಲುಷಿತಗೊಳ್ಳಲು ಕಾರಣವಾಗಿದೆ. ಇದರಿಂದ ಅಂತರ್ಜಲ ಮಟ್ಟವೂ ಕಲುಷಿತಗೊಂಡು, ಜಲಚರಗಳ ಜೀವಕ್ಕೂ ಕುತ್ತು ಬಂದಿದೆ. ಇದರಿಂದಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಮತ್ತಷ್ಟು ಬರ ಎದುರಾಗಲಿದ್ದು, ಜೀವಜಲಕ್ಕೂ ಹಾಹಾಕಾರ ಆರಂಭವಾಗುವ ಆತಂಕ ಎದುರಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular