HomeKarnatakaಮಂಗನನ್ನು ರಕ್ಷಿಸಲು ಹೋಗಿ ಭೀಕರ ಅಪಘಾತ: ಆಟೋ ಚಾಲಕ ಸ್ಥಳದಲ್ಲೇ ಸಾವು

ಮಂಗನನ್ನು ರಕ್ಷಿಸಲು ಹೋಗಿ ಭೀಕರ ಅಪಘಾತ: ಆಟೋ ಚಾಲಕ ಸ್ಥಳದಲ್ಲೇ ಸಾವು

ತುಮಕೂರು: ರಸ್ತೆ ದಾಟುತ್ತಿದ್ದ ಮಂಗನನ್ನು ರಕ್ಷಿಸಲು ಹೋಗಿ ಆಟೋ ಚಾಲಕ ಭೀಕರ ಅಪಘಾತಕ್ಕೀಡಾಗಿದ್ದು, ಸ್ಥಳದಲ್ಲಿಯೇ ಚಾಲಕ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಸೋಂಪುರ ನಿವಾಸಿ ಮಹೇಂದ್ರಕುಮಾರ್ ಮೃತ ಚಾಲಕ. ಕೊರಟಗೆರೆಯಿಂದ ತುಮಕೂರು ಕಡೆಗೆ ಆಟೋ ತೆರಳುತ್ತಿದ್ದಾಗ ಕೋತಿಯೊಂದು ರಸ್ತೆಗೆ ಅಡ್ಡಬಂದಿದೆ. ಅದನ್ನು ರಕ್ಷಿಸಲು ಹೋಗಿ ಚಾಲಕ ತಕ್ಷಣ ಆಟೋ ಬ್ರೇಕ್ ಹಾಕಿದ್ದಾನೆ. ಏಕಾಏಕಿ ಬ್ರೇಕ್ ಹಾಕುತ್ತಿದ್ದಂತೆ ಆಟೋ ಪಲ್ಟಿಯಾಗಿ ಬಿದ್ದಿದೆ.

ಆಟೋಗೆ ತುಮಕೂರು ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular