HomeKarnatakaBIG NEWS: ಮೈಶುಗರ್ ಕಾರ್ಖಾನೆಯಲ್ಲಿ ದುರಂತ; ಬಾಯ್ಲರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕ ದುರ್ಮರಣ

BIG NEWS: ಮೈಶುಗರ್ ಕಾರ್ಖಾನೆಯಲ್ಲಿ ದುರಂತ; ಬಾಯ್ಲರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕ ದುರ್ಮರಣ

ಮಂಡ್ಯ: ಮಂಡ್ಯ ಮೈಶುಗರ್ ಕಾರ್ಖಾನೆಯಲ್ಲಿ ದುರಂತವೊಂದು ಸಂಭವಿಸಿದ್ದು, ಬಾಯ್ಲರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

22 ವರ್ಷದ ರಾಕೇಶ್ ಮೃತ ಕಾರ್ಮಿಕ. ಬಿಹಾರ ಮೂಲದ ಕಾರ್ಮಿಕ ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿದ್ದ. ಇಂದು ಬೆಳಿಗ್ಗೆ ಕಾರ್ಖಾನೆಯಲ್ಲಿ ಬೂದಿ ತೆಗೆಯುವ ಮಷಿನ್ ಬೆಲ್ಟ್ ಗೆ ಸಿಲುಕಿ ಮೃತಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರ್ಖಾನೆ ಸಿಬ್ಬಂದಿ ಆತನನ್ನು ತಕ್ಷಣ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲೇ ಕಾರ್ಮಿಕ ಮೃತಪಟ್ಟಿರುವುದು ತಿಳಿದುಬಂದಿದೆ.

 

For Latest News Updates, Join Our Whatsapp Community🚩
RELATED ARTICLES

Most Popular