HomeKarnatakaBREAKING NEWS: ಮತ್ತೊಂದು ವಿವಾದಕ್ಕೆ ಸಿಲುಕಿದ ಜಾತಿಗಣತಿ ವರದಿ: ಸೀಲ್ಡ್ ಬಾಕ್ಸ್ ನಲ್ಲಿದ್ದ ಜಾತಿಗಣತಿ ಮೂಲ...

BREAKING NEWS: ಮತ್ತೊಂದು ವಿವಾದಕ್ಕೆ ಸಿಲುಕಿದ ಜಾತಿಗಣತಿ ವರದಿ: ಸೀಲ್ಡ್ ಬಾಕ್ಸ್ ನಲ್ಲಿದ್ದ ಜಾತಿಗಣತಿ ಮೂಲ ಪ್ರತಿಯೇ ನಾಪತ್ತೆ

ಬೆಂಗಳೂರು: ಜಾತಿಗಣತಿ ವರದಿ ಮತ್ತೊಂದು ಹೊಸ ವಿವಾದಕ್ಕೆ ಸಿಲುಕಿಕೊಂಡಂತಿದೆ. ವರದಿಯ ಮೂಲ ಪ್ರತಿಯೇ ಈಗ ನಾಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

ಜಾತಿಗಣತಿಗೆ ಸಂಬಂಧಿಸಿದ ಮೂಲ ವರದಿಯೇ ಈಗ ಕಾಣೆಯಾಗಿದೆ ಎನ್ನಲಾಗುತ್ತಿದೆ. ಸೀಲ್ಡ್ ಬಾಕ್ಸ್ ನಲ್ಲಿದ್ದ ಜಾತಿಗಣತಿ ಮೂಲ ಪ್ರತಿ ಅಲಭ್ಯವಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ದೂರು ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದು, ಜಾತಿಗಣತಿ ವರದಿಯ ಮೂಲ ಪ್ರತಿ ಅಲಭ್ಯವಾಗಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಸೀಲ್ಡ್ ಬಾಕ್ಸ್ ನಲ್ಲಿದ್ದ ವರದಿ ಇದ್ದಕ್ಕಿದ್ದಂತೆ ಅಲಭ್ಯವಾಗಲು ಕಾರಣವೇನು? ಎಂಬುದೇ ಪ್ರಶ್ನೆ.

For Latest News Updates, Join Our Whatsapp Community🚩
RELATED ARTICLES

Most Popular