HomeLatest NewsSHOCKING NEWS: ಮಾನಸಿಕ ಅಸ್ವಸ್ಥ ತಾಯಿಯನ್ನು ರಸ್ತೆಬದಿ ಬಿಟ್ಟು ಹೋದ ಮಗ!

SHOCKING NEWS: ಮಾನಸಿಕ ಅಸ್ವಸ್ಥ ತಾಯಿಯನ್ನು ರಸ್ತೆಬದಿ ಬಿಟ್ಟು ಹೋದ ಮಗ!

ಮಂಡ್ಯ: ಇದೆಂತಹ ಮನ ಕಲಕುವ ದೃಶ್ಯ…. ವೃದ್ಧ ಮಾನಸಿಕ ಅಸ್ವಸ್ಥ ತಾಯಿಯನ್ನು ಮಗನೊಬ್ಬ ರಸ್ತೆ ಬದಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಾಯಿ ತನ್ನ ಮಗನ್ನು ಹೆತ್ತು-ಹೊತ್ತು ಪೋಷಿಸಿ, ವಿದ್ಯಾವಂತ, ಬುದ್ಧಿವಂತನನ್ನಾಗಿ ಮಾಡಿ ಬೆಳಿಸಿದ ಮೇಲೆ ಮಗನಿಗೆ ವೃದ್ಧ ತಾಯಿ ಬೇಡವಾಗಿದ್ದಾಳೆ. ಮಾನಸಿಕವಾಗಿ ಅಸ್ವಸ್ಥವಾಗಿರುವ ವೃದ್ಧ ತಾಯಿಯನ್ನು ಆರೈಕೆ ಮಾಡಿ, ಚಿಕಿತ್ಸೆ ಕೊಡಿಸುವುದನ್ನು ಬಿಟ್ಟು ಕಿಂಚಿತ್ತೂ ಮಾನವೀಯತೆಯನ್ನೂ ತೋರದೆ ತಾಯಿಯನ್ನು ರಸ್ತೆ ಬದಿ ತಂದು ಬಿಟ್ಟು ಹೋಗಿದ್ದಾನೆ.

ಈಗ ಬರುತ್ತೇನೆ ಎಂದು ಹೇಳಿ ತಾಯಿಯನ್ನು ರಸ್ತೆಬದಿ ಬಿಟ್ಟು ಮಗ ನಾಪತ್ತೆಯಾಗಿದ್ದಾನೆ. ಪಾಪ ತಾಯಿ, ತನ್ನ ಮಗ ಬರುತ್ತಾನೆ ಎಂದು ರಸ್ತೆ ಬದಿಯೇ ಮಗನಿಗಾಗಿ ಕಾಯುತ್ತಾ ಕುಳಿತಿರುವುದನ್ನು ನೋಡಿದರೆ ಕರುಳು ಹಿಂಡುವಂತಿದೆ. ಸ್ಥಳೀಯರು ವೃದ್ಧೆ ರಸ್ತೆ ಬದಿ ಇರುವುದನ್ನು ಕಂಡು ವಿಚಾರಿಸಿದಾಗ ನನ್ನ ಮಗ ಬರುತ್ತಾನೆ. ಮಗ ಬಂದು ಕರೆದುಕೊಂಡು ಹೋಗಿತ್ತಾನೆ ಎಂದಿದ್ದಾರೆ. ಎಷ್ಟು ಹೊತ್ತಾದರೂ ಮಗನ ಸುಳಿವಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

70-80 ವರ್ಷದ ವೃದ್ಧ ತಾಯಿಯನ್ನು ಸ್ಥಳೀಯರು ರಕ್ಷಿಸಿ ಆಹಾರ ನೀಡಿದ್ದಾರೆ. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿ ಅಧಿಕಾರಿಗಳು ವೃದ್ಧೆಯನ್ನು ರಕ್ಷಿಸಿ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular