HomeKarnatakaBIG NEWS: ಮತದಾನ ಮಾಡಿ ಮನೆಗೆ ವಾಪಾಸ್ ಆದ ವೃದ್ಧ ಸಾವು

BIG NEWS: ಮತದಾನ ಮಾಡಿ ಮನೆಗೆ ವಾಪಾಸ್ ಆದ ವೃದ್ಧ ಸಾವು

ಮಂಡ್ಯ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಿತು. ಮತದಾನ ಮಾಡಿ ತನ್ನದೇ ಮಾಲಿಕತ್ವದ ಬಟ್ಟೆ ಅಂಗಡಿಗೆ ಬಂದಿದ್ದ ಮತದಾರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿರುವ ಬೆನಲ್ಲೇ ಮಂಡ್ಯದಲ್ಲಿ ಮತ್ತೊಂದು ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚನ್ನೇಗೌಡನಹಳ್ಳಿಯಲ್ಲಿ ಮತದಾನ ಮಾಡಿ ಮನೆಗೆ ವಾಪಾಸ್ ಆಗಿದ್ದ ವೃದ್ಧರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

87 ವರ್ಷದ ಕುಂದೂರಯ್ಯ ಮೃತರು. ಇಂದು ಬೆಳಿಗ್ಗೆಯೇ ಮತಗಟ್ಟೆಗೆ ತೆರಳಿ ಮತದಾನ ಮಾಡಿ ಬಂದಿದ್ದ ಕುಂದೂರಯ್ಯ, ಕಾಲುನೋವಿನಿಂದ ಬಳಲುತ್ತಿದ್ದರು. ಕೆಲ ಸಮಯದಲ್ಲೇ ಇದ್ದಕ್ಕಿದ್ದಂತೆ ಕೊನೆಯುಸಿರೆಳೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular