HomeKarnatakaBIG NEWS: ಬೆಂಗಳೂರು ಸೆಂಟ್ರಲ್ ನಲ್ಲಿ ಅತಿ ಕಡಿಮೆ ವೋಟಿಂಗ್: ಸಂಜೆ 5 ಗಂಟೆಯವರೆಗೆ 14...

BIG NEWS: ಬೆಂಗಳೂರು ಸೆಂಟ್ರಲ್ ನಲ್ಲಿ ಅತಿ ಕಡಿಮೆ ವೋಟಿಂಗ್: ಸಂಜೆ 5 ಗಂಟೆಯವರೆಗೆ 14 ಕ್ಷೇತ್ರಗಳಲ್ಲಿ ಶೇ.63.90ರಷ್ಟು ಮತದಾನ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮೊದಲ ಹಂತದ ಮತದಾನ ನಡೆಯಿತು. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾನವಾಗಿದೆ.

ಸಂಜೆ 5 ಗಂಟೆಯವರೆಗೆ 14 ಕ್ಷೇತ್ರಗಳಲ್ಲಿ ಶೇ.63.90ರಷ್ಟು ಮತದಾನವಾಗಿದೆ. ಯಾವ ಕ್ಷೇತ್ರಗಳಲ್ಲಿ ಎಷ್ಟು ಮತದಾನ? ಇಲ್ಲಿದೆ ಮಾಹಿತಿ

ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಶೇ.48.61ರಷ್ಟು ಮತದಾನವಾಗಿದೆ.
ಬೆಂಗಳೂರು ಉತ್ತರ ಕ್ಷೇತ್ರ ಶೇ.50.04 ರಷ್ಟು ಮತದಾನ
ಬೆಂಗಳೂರು ಗ್ರಾಮಾಂತರ ಕ್ಷೇತ್ರ ಶೇ.61.78ರಷ್ಟು ಮತದಾನ
ಬೆಂಗಳೂರು ದಕ್ಷಿಣ ಕ್ಷೇತ್ರ ಶೇ.49.37ರಷ್ಟು ಮತದಾನ
ಚಾಮರಾಜನಗರ ಕ್ಷೇತ್ರ ಶೇ.69.60ರಷ್ಟು ಮತದಾನ
ಚಿಕ್ಕಬಳ್ಳಾಪುರ ಕ್ಷೇತ್ರ ಶೇ.70.97ರಷ್ಟು ಮತದಾನ
ಚಿತ್ರದುರ್ಗ ಕ್ಷೇತ್ರ ಶೇ.67ರಷ್ಟು ಮತದಾನ
ದಕ್ಷಿಣ ಕನ್ನಡ ಕ್ಷೇತ್ರ ಶೇ.71.83ರಷ್ಟು ಮತದಾನ
ಹಾಸನ ಕ್ಷೇತ್ರ ಶೇ.72.13ರಷ್ಟು ಮತದಾನ
ಕೋಲಾರ ಕ್ಷೇತ್ರ ಶೇ.71.26ರಷ್ಟು ಮತದಾನ
ಮಂಡ್ಯ ಶೇ.74.87ರಷ್ಟು ಮತದಾನ
ಮೈಸೂರು-ಕೊಡಗು ಕ್ಷೇತ್ರ ಶೇ.65.85ರಷ್ಟು ಮತದಾನ
ತುಮಕೂರು ಕ್ಷೇತ್ರ ಶೇ.72.10ರಷ್ಟು ಮತದಾನ
ಉಡುಪಿ-ಚಿಕ್ಕಮಗಳೂರು ಲೋಕಸಭಾಕ್ಷೇತ್ರ ಶೇ.72.13ರಷ್ಟು ಮತದಾನ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular