HomeLatest NewsSHOCKING: ಫ್ರೀಯಾಗಿ ಮದ್ಯ ಕೊಟ್ಟಿಲ್ಲವೆಂದು ಬಾರ್ ಅಂಗಡಿಗೆ ಬೆಂಕಿ ಇಟ್ಟು, ಮಾಲೀಕನ ಕಾರಿಗೂ ಬೆಂಕಿ ಹಚ್ಚಿದ...

SHOCKING: ಫ್ರೀಯಾಗಿ ಮದ್ಯ ಕೊಟ್ಟಿಲ್ಲವೆಂದು ಬಾರ್ ಅಂಗಡಿಗೆ ಬೆಂಕಿ ಇಟ್ಟು, ಮಾಲೀಕನ ಕಾರಿಗೂ ಬೆಂಕಿ ಹಚ್ಚಿದ ಪುಂಡರು

ಮಂಡ್ಯ: ಫ್ರೀಯಾಗಿ ಮದ್ಯ ಕೊಟ್ಟಿಲ್ಲವೆಂದು ಪುಡಾರಿಗಳ ಗುಂಪೊಂದು ಬಾರ್ ಅಂಗಡಿಗೆ ಬೆಂಕಿ ಹಚ್ಚಿ ಪುಂಡಾಟ ಮೆರೆದಿರುವ ಘಟನೆ ಮಂಡ್ಯ ಜಿಲ್ಲೆಯ ಅಗಸನಹಳ್ಳಿಯಲ್ಲಿ ನಡೆದಿದೆ.

ಬಾರ್ ಗೆ ಬಂದಿದ್ದ ಮುರುಕನಹಳ್ಳಿ ಗ್ರಾಮದ ರಕ್ಷಿತ್ ಹಾಗೂ ಸ್ನೇಹಿತರು ಬಾರ್ ಮಾಲೀಕನಿಗೆ ಫ್ರೀಯಾಗಿ ಎಣ್ಣೆ ಕೊಡುವಂತೆ ಕೇಳಿದ್ದಾರೆ. ಅದಕ್ಕೆ ಬಾರ್ ಮಾಲೀಕ ಒಪ್ಪಿಲ್ಲ. ಇದರಿಂದ ಸಿಟ್ಟಿಗೆದ್ದು ಪುಂಡ ಯುವಕರು ಗಲಾಟೆ ಮಾಡಿದ್ದಾರೆ. ಆದರೂ ಬಾರ್ ಮಾಲೀಕ ಎಣ್ಣೆಕೊಟ್ಟಿಲ್ಲ.

ಬಾರ್ ನಿಂದ ಹೊರ ಬಂದ ರಕ್ಷಿತ್ ಹಾಗೂ ಸ್ನೇಹಿತರು ಬಾರ್ ಗೆ ಬೆಂಕಿ ಹಚ್ಚಿದ್ದಾರೆ. ಬಳಿಕ ಸ್ಥಳದಿಂದ ತೆರಳಿದವರು ಮತ್ತೆ ಬೈಕ್ ನಲ್ಲಿ ಪೆಟ್ರೋಲ್ ತೆಗೆದುಕೊಂಡು ಬಂದು ಬಾರ್ ಮಾಲೀಕ ಪರಮೇಶ್ ಎಂಬುವವರ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪುಡಾರಿಗಳ ಪುಂಡಾಟ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular