HomeLifestyleಕೊಲೆಸ್ಟ್ರಾಲ್ ಎಂಬ ನಿಶ್ಯಬ್ದ ಕೊಲೆಗಾರನ ಬಗ್ಗೆ ಎಚ್ಚರ: ಹೃದಯಾಘಾತ ತಪ್ಪಿಸಲು ವೈದ್ಯರು ನೀಡಿದ ಈ ಸಲಹೆ...

ಕೊಲೆಸ್ಟ್ರಾಲ್ ಎಂಬ ನಿಶ್ಯಬ್ದ ಕೊಲೆಗಾರನ ಬಗ್ಗೆ ಎಚ್ಚರ: ಹೃದಯಾಘಾತ ತಪ್ಪಿಸಲು ವೈದ್ಯರು ನೀಡಿದ ಈ ಸಲಹೆ ಪಾಲಿಸಿ

ಇಂದಿನ ಧಾವಂತದ ಬದುಕಿನಲ್ಲಿ ಕೊಲೆಸ್ಟ್ರಾಲ್ ಸಮಸ್ಯೆ ಎಂಬುದು ಕೇವಲ ವಯಸ್ಸಾದವರನ್ನು ಮಾತ್ರವಲ್ಲದೆ ಯುವಜನತೆಯನ್ನೂ ಕಾಡುತ್ತಿದೆ. ಸರಿಯಾದ ಸಮಯದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬಾರದಿದ್ದರೆ ಅದು ರಕ್ತನಾಳಗಳಲ್ಲಿ ಸಂಗ್ರಹವಾಗಿ ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯು (Stroke) ಉಂಟಾಗಲು ಪ್ರಮುಖ ಕಾರಣವಾಗುತ್ತದೆ. ಈ ಕುರಿತು ಕೊಚ್ಚಿಯ ಆಸ್ಟರ್ ಮೆಡ್‌ಸಿಟಿ ಮತ್ತು ಎರ್ನಾಕುಲಂನ ತಜ್ಞ ವೈದ್ಯರು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಅಪಾಯದ ಮುನ್ಸೂಚನೆ ಏನು? ಸಾಮಾನ್ಯವಾಗಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಯಾವುದೇ ಬಾಹ್ಯ ಲಕ್ಷಣಗಳು ಕಂಡುಬರುವುದಿಲ್ಲ. ಇದನ್ನು ‘ನಿಶ್ಯಬ್ದ ಕೊಲೆಗಾರ’ (Silent Killer) ಎಂದೇ ಕರೆಯಲಾಗುತ್ತದೆ. ಅಜಿತ್ (ಹೆಸರು ಬದಲಾಯಿಸಲಾಗಿದೆ) ಎಂಬ 50 ವರ್ಷದ ವ್ಯಕ್ತಿಯ ಉದಾಹರಣೆಯನ್ನು ನೀಡಿದ ವೈದ್ಯರು, ಅವರಿಗೆ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಧೂಮಪಾನದ ಅಭ್ಯಾಸವಿತ್ತು. ಪರೀಕ್ಷೆ ಮಾಡಿದಾಗ ಅವರಲ್ಲಿ ಕೊಲೆಸ್ಟ್ರಾಲ್ ಮಟ್ಟ 280 mg/dl ಇರುವುದು ಪತ್ತೆಯಾಯಿತು. ಇಂತಹ ಪರಿಸ್ಥಿತಿಯಲ್ಲಿ ಕೇವಲ ಆಹಾರ ಬದಲಾವಣೆ ಸಾಲದು, ತಕ್ಷಣವೇ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ ಎಂದು ಡಾ. ಸಂದೀಪ್ ಆರ್ ತಿಳಿಸಿದ್ದಾರೆ.

ನಿಯಂತ್ರಣ ಹೇಗೆ ಸಾಧ್ಯ? ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಕೇವಲ ಮಾತ್ರೆಗಳು ಸಾಕಾಗುವುದಿಲ್ಲ. ಜೀವನಶೈಲಿಯಲ್ಲಿ ಈ ಕೆಳಗಿನ ಬದಲಾವಣೆಗಳು ಅತ್ಯಗತ್ಯ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ಆಹಾರ ಕ್ರಮ: ಸಕ್ಕರೆ, ಉಪ್ಪು ಮತ್ತು ಎಣ್ಣೆಯುಕ್ತ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡುವುದು.
  • ವ್ಯಾಯಾಮ: ಪ್ರತಿದಿನ ನಿಯಮಿತವಾಗಿ ದೈಹಿಕ ಚಟುವಟಿಕೆ ಅಥವಾ ವ್ಯಾಯಾಮ ಮಾಡುವುದು.
  • ತೂಕ ಇಳಿಕೆ: ಬೊಜ್ಜು ಅಥವಾ ಹೆಚ್ಚಿನ ತೂಕವನ್ನು ಕಡಿಮೆ ಮಾಡಿಕೊಳ್ಳುವುದು.
  • ಧೂಮಪಾನ ತ್ಯಜಿಸುವುದು: ಧೂಮಪಾನವು ರಕ್ತನಾಳಗಳನ್ನು ಕಿರಿದಾಗಿಸುತ್ತದೆ, ಇದನ್ನು ತಕ್ಷಣವೇ ನಿಲ್ಲಿಸಬೇಕು.

ಯುವಜನತೆಗೆ ಎಚ್ಚರಿಕೆ ಆಧುನಿಕ ಆಹಾರ ಪದ್ಧತಿ ಮತ್ತು ದೈಹಿಕ ಶ್ರಮವಿಲ್ಲದ ಜೀವನಶೈಲಿಯಿಂದಾಗಿ ಕೇರಳದಂತಹ ರಾಜ್ಯಗಳಲ್ಲಿ ಶೇ. 52ರಷ್ಟು ಜನರಲ್ಲಿ ಅತಿಯಾದ ಕೊಲೆಸ್ಟ್ರಾಲ್ ಕಂಡುಬರುತ್ತಿದೆ ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ. 40 ವರ್ಷ ಮೇಲ್ಪಟ್ಟವರು, ಅದರಲ್ಲೂ ಮಧುಮೇಹ ಮತ್ತು ಬಿಪಿ ಇರುವವರು ನಿಯಮಿತವಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಅವಶ್ಯಕ. “ಕೊಲೆಸ್ಟ್ರಾಲ್ ಮಟ್ಟವನ್ನು 39 mg/dl ನಷ್ಟು ಕಡಿಮೆ ಮಾಡಿದರೆ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ಶೇ. 20-25 ರಷ್ಟು ತಗ್ಗಿಸಬಹುದು” ಎನ್ನುತ್ತಾರೆ ತಜ್ಞರು.

ಪ್ರಾಥಮಿಕ ಹಂತದಲ್ಲೇ ಕೊಲೆಸ್ಟ್ರಾಲ್ ಅನ್ನು ಗುರುತಿಸಿ, ಎಲ್‌ಡಿಎಲ್ (LDL) ಮಟ್ಟವನ್ನು 100 mg/dl ಗಿಂತ ಕಡಿಮೆ ಇಟ್ಟುಕೊಳ್ಳುವುದು ಆರೋಗ್ಯಕರ ಜೀವನದ ಗುರಿಯಾಗಲಿ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular