ಬಾಗಲಕೋಟೆ: ಮೃತಪಟ್ಟಿದ್ದಾನೆ ಎಂದುಕೊಂಡಿದ್ದ ವ್ಯಕ್ತಿ ಬದುಕಿ ಮತ್ತೆ ಮಾತನಾಡಿದ ಅಚ್ಚರಿಯ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ನಡೆದಿದೆ.
ಜಮಖಂಡಿಯ ಮೊಮಿನ್ ಗಲ್ಲಿಯ ಮುಬಾರಕ್ ಆವಟಿ(65) ಅನಾರೋಗ್ಯದ ಕಾರಣ ಬೆಳಗಾವಿಯ ಕೈಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ನಂತರ ಕುಟುಂಬದವರು ಅಂತ್ಯ ಸಂಸ್ಕಾರಕ್ಕೆಂದು ಊರಿಗೆ ಕರೆದುಕೊಂಡು ಹೋಗುವಾಗ ಲೋಕಾಪುರ ಸಮೀಪ ರೋಡ್ ಹಂಪ್ಸ್ ಬರುತ್ತಿದ್ದಂತೆ ವಾಹನ ಅಲಗಾಡಿದೆ. ಆಗ ಮುಬಾರಕ್ ಉಸಿರಾಡಲು ಆರಂಭಿಸಿ ಕುಟುಂಬದವರ ಜೊತೆಗೆ ಮಾತನಾಡಿದ್ದಾರೆ. ಕೂಡಲೇ ಅವರನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.
ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದ ಮುಬಾರಕ್ ಏಕಾಏಕಿ ಮಾತನಾಡಿದ್ದನ್ನು ಕಂಡು ಕುಟುಂಬದವರಿಗೆ ಶಾಕ್ ಆಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

