HomeKarnatakaದೇವರ ಎದುರು ಕೆಂಡದಲ್ಲಿ ಕಂಬಳಿ ಹಾಸಿ ಕುಳಿತ ವ್ಯಕ್ತಿ....!

ದೇವರ ಎದುರು ಕೆಂಡದಲ್ಲಿ ಕಂಬಳಿ ಹಾಸಿ ಕುಳಿತ ವ್ಯಕ್ತಿ….!

ವಿಜಯಪುರ: ಮೊಹರಂ ಹಬ್ಬದ ಆಚರಣೆ ವೇಳೆಯೇ ವ್ಯಕ್ತಿಯೋರ್ವ ದೇವರ ಮುಂದೆ ಕೆಂಡದಲ್ಲಿ ಕಂಬಳಿ ಹಾಸಿ ಕುಳಿತ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ಅಮರಗೋಳ ಗ್ರಾಮದಲ್ಲಿ ಯಲ್ಲಾಲಿಂಗ ಹಿರೇಹಾಳ ಎಂಬ ವ್ಯಕ್ತಿ ಅಲಾಯಿ ದೇವರ ಎದುರು ಹಾಕಿದ ಕೆಂಡದ ಮೇಲೆ ಕಂಬಳಿ ಹಾಸಿ ಕುಳಿತುಕೊಂಡಿದ್ದಾನೆ. ಅಷ್ಟೆ ಅಲ್ಲ ಬರಿಗೈಯಲ್ಲಿ ಕೆಂಡವನ್ನು ಹಿಡಿದು ದೇವರಿಗೆ ಕೆಂಡದಾರತಿ ಬೆಳಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಂಡದ ಮೇಲೆ ಕುಳಿತರೂ, ಬರಿಗೈಯ್ಯಲ್ಲಿ ಕೆಂಡ ಹಿಡಿದು ಬೆಳಗಿದರೂ ಯಲ್ಲಾಲಿಂಗನಿಗೆ ಸುಟ್ಟಗಾಯವಾಗಿಲ್ಲ. ಈ ಅಚ್ಚರಿ ಕಂಡ ಗ್ರಾಮಸ್ಥರು ಇದು ಅಲಾಯಿ ದೇವರ ಪವಾಡ ಎಂದು ಹೇಳುತ್ತಿದ್ದಾರೆ. ಕೆಂಡದ ಮೇಲೆ ಕುಳಿತು, ಕೈಯ್ಯಲ್ಲಿ ಕೆಂಡ ತುಂಬಿ ಆರತಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

For Latest News Updates, Join Our Whatsapp Community🚩
RELATED ARTICLES

Most Popular