HomeRecipiesಮಕ್ಕಳಿಗೆ ಮಾಡಿ ಕೊಡಿ ರುಚಿಕರ ಗೋಧಿ ಹಿಟ್ಟಿನ ಬರ್ಫಿ

ಮಕ್ಕಳಿಗೆ ಮಾಡಿ ಕೊಡಿ ರುಚಿಕರ ಗೋಧಿ ಹಿಟ್ಟಿನ ಬರ್ಫಿ

ಮನೆಗೆ ಯಾರಾದರೂ ಧಿಡೀರನೆ ಅತಿಥಿಗಳು ಬಂದಾಗ ಅಥವಾ ಮನೆಮಂದಿಗೆ ಸಿಹಿ ತಿನ್ನಬೇಕು ಅನಿಸಿದಾಗ ಥಟ್ಟಂತ ರೆಡಿಯಾಗುವ ಗೋಧಿಹಿಟ್ಟಿನ ಬರ್ಫಿ ಇಲ್ಲಿದೆ ನೋಡಿ, ಇದರ ರುಚಿಯೂ ಕೂಡ ತುಂಬಾನೇ ಚೆನ್ನಾಗಿರುತ್ತದೆ. ಮಾಡುವುದೂ ಸುಲಭ.

ಬೇಕಾಗುವ ಸಾಮಗ್ರಿಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1 ಕಪ್ – ಗೋಧಿ ಹಿಟ್ಟು, ½ ಕಪ್ – ತುಪ್ಪ, 1 ಕಪ್ – ಬೆಲ್ಲದ ಪುಡಿ.

ಮಾಡುವ ವಿಧಾನ:

ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿ ಅದು ಬಿಸಿಯಾಗುತ್ತಲೇ ಗೋಧಿ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಗೋಧಿಹಿಟ್ಟು ಪರಿಮಳ ಬರುವವರೆಗೆ ಹುರಿದುಕೊಳ್ಳಿ.

ನಂತರ ಇದಕ್ಕೆ ಬೆಲ್ಲದ ಪುಡಿ ಸೇರಿಸಿ ಕೈ ಬಿಡದೇ ಮಿಕ್ಸ್ ಮಾಡುತ್ತಾ ಇರಿ. ಇದು ತಳ ಬಿಡುತ್ತಿದ್ದಂತೆ ಪ್ಲೇಟ್ ಗೆ ತುಪ್ಪ ಸವರಿ ಈ ಮಿಶ್ರಣವನ್ನು ಹಾಕಿ 10 ನಿಮಿಷ ಬಿಟ್ಟು ಕತ್ತರಿಸಿದರೆ ರುಚಿಕರವಾದ ಬರ್ಫಿ ಸವಿಯಲು ಸಿದ್ಧ.

For Latest News Updates, Join Our Whatsapp Community🚩
RELATED ARTICLES

Most Popular