HomeHealthಅಸಿಡಿಟಿ ಸಮಸ್ಯೆಗೆ ಕಾರಣ ಮತ್ತು ಸುಲಭದ ಮನೆಮದ್ದು

ಅಸಿಡಿಟಿ ಸಮಸ್ಯೆಗೆ ಕಾರಣ ಮತ್ತು ಸುಲಭದ ಮನೆಮದ್ದು

ಅಸಿಡಿಟಿಯಿಂದ ಎದೆ ಮತ್ತು ಗಂಟಲಿನಲ್ಲಿ ಉರಿ ಪ್ರಾರಂಭವಾಗುತ್ತದೆ. ಅಸಿಡಿಟಿಯಿಂದ ಇನ್ನೂ ಅನೇಕ ಬಗೆಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅಸಿಡಿಟಿ ವಿಪರೀತವಾಗಿದ್ದರೆ ನಂತರ ಆಸಿಡ್ ರಿಫ್ಲಕ್ಸ್ ಸಮಸ್ಯೆಗೂ ಕಾರಣವಾಗಬಹುದು. ಆದ್ದರಿಂದ ಇದನ್ನು ನಿರ್ಲಕ್ಷಿಸುವುದು ಅಪಾಯಕಾರಿ. ಸುಲಭವಾಗಿ ಮನೆಮದ್ದುಗಳ ಮೂಲಕವೇ ಅಸಿಡಿಟಿಯನ್ನು ನಿವಾರಿಸಿಕೊಳ್ಳಬಹುದು.

ಆಹಾರ ಪದ್ಧತಿಯಲ್ಲಿ ಬದಲಾವಣೆ- ವಿಟಮಿನ್ ಭರಿತ ಆಹಾರವನ್ನು ಸೇವಿಸಿ. ಕರಿದ ಪದಾರ್ಥಗಳನ್ನು ತಿನ್ನಬೇಡಿ. ಒಂದೇ ಬಾರಿಗೆ ಅತಿಯಾಗಿ ತಿನ್ನುವ ಬದಲು, ಸ್ವಲ್ಪ ಸ್ವಲ್ಪ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ತಿಂದ ತಕ್ಷಣ ಆರಾಮಾಗಿ ಕುಳಿತುಕೊಳ್ಳಬೇಡಿ, ಒಂದ್ಹತ್ತು ನಿಮಿಷ ನಡೆಯಿರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರ್ಬೊನೇಟೆಡ್ ಪಾನೀಯ ಕುಡಿಯಬೇಡಿ– ಅಸಿಡಿಟಿ ಸಮಸ್ಯೆ ಇದ್ದರೆ ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯಬಾರದು. ಏಕೆಂದರೆ ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವುದರಿಂದ ಗ್ಯಾಸ್ ಮತ್ತು ಹೊಟ್ಟೆ ಉಬ್ಬರಿಸುತ್ತದೆ.

ಮಲಗುವ ಮಾದರಿ – ಮಲಗುವ ಸಮಯದಲ್ಲಿ ನಿಮ್ಮ ದೇಹದ ಮೇಲ್ಭಾಗವನ್ನು ಎತ್ತರದಲ್ಲಿ ಇರಿಸಿ ಮತ್ತು ನಿಮ್ಮ ಪಾದಗಳನ್ನು ಸ್ವಲ್ಪ ಕೆಳಗಿರಿಸಿ. ಈ ರೀತಿ ಮಾಡುವುದರಿಂದ ನಿದ್ರೆಯೂ ಚೆನ್ನಾಗಿ ಬರುತ್ತದೆ. ಮಾನಸಿಕ ಆರೋಗ್ಯವು ಉತ್ತಮವಾಗಿರುತ್ತದೆ. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಸಹ ಕಡಿಮೆಯಾಗುತ್ತವೆ. ಒಂದೇ ಮಗ್ಗುಲಿನಲ್ಲಿ ಮಲಗುವ ಅಭ್ಯಾಸವಿದ್ದರೆ ಎಡಭಾಗದಲ್ಲಿ ಮಲಗುವುದು ಉತ್ತಮ ಎಂಬುದನ್ನು ನೆನಪಿನಲ್ಲಿಡಿ.

ತೂಕವನ್ನು ನಿಯಂತ್ರಣದಲ್ಲಿಡಿ–ನೀವು ಅಧಿಕ ತೂಕ ಹೊಂದಿದ್ದರೆ ಆಸಿಡ್ ರಿಫ್ಲೆಕ್ಸ್‌ ಮತ್ತು ಎದೆಯುರಿ ಸಮಸ್ಯೆ ಹೆಚ್ಚು. ಆದ್ದರಿಂದ  ಮೊದಲು ತೂಕವನ್ನು ನಿಯಂತ್ರಿಸಿ. ತೂಕವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದರಿಂದ ಅಸಿಡಿಟಿ ಸಮಸ್ಯೆಯಿಂದ ಪಾರಾಗಬಹುದು.

ಧೂಮಪಾನ ಬೇಡ-ಹೆಚ್ಚಿನ ಜನರು ಅಸಿಡಿಟಿ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಾರೆ, ಇದರ ಹಿಂದಿನ ಕಾರಣ ಧೂಮಪಾನವೂ ಆಗಿರಬಹುದು. ನೀವು ಧೂಮಪಾನ ಮಾಡುತ್ತಿದ್ದರೆ ತಕ್ಷಣವೇ ಅದನ್ನು ಬಿಟ್ಟುಬಿಡಿ.

For Latest News Updates, Join Our Whatsapp Community🚩
RELATED ARTICLES

Most Popular