ಪಟ್ಟಣಂತಿಟ್ಟ: ಶ್ರೀ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ವಾರ್ಷಿಕ ಮಕರ ಜ್ಯೋತಿ ಬುಧವಾರ ದರ್ಶನವಾಗಲಿದೆ.
ಜನವರಿ 14ರ ಮಧ್ಯಾಹ್ನದಿಂದಲೇ ಸಂಕ್ರಾಂತಿ ಆರಂಭವಾಗಲಿದೆ. 14ರಂದು ಸಂಜೆ ಮಕರ ಜ್ಯೋತಿ ಕಾಣಿಸಿಕೊಳ್ಳಲಿದೆ. ಭಕ್ತರ ಸಂಖ್ಯೆಗೆ ಈ ಬಾರಿ ಮಿತಿ ಹೇರಲಾಗಿದೆ. 30,000 ಆನ್ಲೈನ್ ಮತ್ತು 5000 ಕೌಂಟರ್ ಟಿಕೆಟ್ ಹೊಂದಿದವರಿಗೆ ಮಾತ್ರವೇ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇನ್ನು ಭಕ್ತರ ಭದ್ರತೆಗಾಗಿ 2000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. 136 ಸ್ವಯಂಸೇವಕರು, 31 ತುರ್ತು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷ ನವೆಂಬರ್ 16ರಂದು ಆರಂಭವಾದ ಮಂಡಲಂ ಮಕರವಿಳಕ್ಕುನಲ್ಲಿ ಜನವರಿ 12ರವರೆಗೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ 51 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ಇಂದು ಮಕರ ಜ್ಯೋತಿಯ ದರ್ಶನಕ್ಕೆ ಹೆಚ್ಚಿನ ಭಕ್ತರು ಆಗಮಿಸಿದ್ದಾರೆ.

