HomeKarnatakaBREAKING : ವಿಜಯಪುರದಲ್ಲಿ ನಿವೃತ್ತ ಶಿಕ್ಷಕನ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಆಸ್ತಿ, ಪ್ರಿಯಕರನಿಗಾಗಿ...

BREAKING : ವಿಜಯಪುರದಲ್ಲಿ ನಿವೃತ್ತ ಶಿಕ್ಷಕನ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಆಸ್ತಿ, ಪ್ರಿಯಕರನಿಗಾಗಿ ತಂದೆಯನ್ನೇ ಕೊಂದ ಪಾಪಿ ಪುತ್ರಿ.!

ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಚೌಡಿಹಾಳ ರಸ್ತೆಯ ಪೂಜಾರಿ ವಸ್ತಿ ತೋಟದ ಬಳಿ ನಡೆದಿದ್ದ ನಿವೃತ್ತ ಶಿಕ್ಷಕ ಸಿದ್ದಪ್ಪ ಅಂಜುಟಗಿ ಅವರ ಕೊಲೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆಸ್ತಿ ವಿಚಾರ ಹಾಗೂ ಪ್ರಿಯಕರನ ಸಂಬಂಧಕ್ಕೆ ತಂದೆ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಪುತ್ರಿಯೇ ತನ್ನ ಪ್ರಿಯಕರ ಹಾಗೂ ಆತನ ಸ್ನೇಹಿತನೊಂದಿಗೆ ಸೇರಿ ತಂದೆಯನ್ನು ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ತಂದೆಯನ್ನೇ ಕೊಂದ ಮಗಳು

ಸಿದ್ದಪ್ಪ ಅಂಜುಟಗಿ ನಿವೃತ್ತ ಶಿಕ್ಷಕರಾಗಿದ್ದು, ಸುಮಾರು ಎರಡು ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ನಿವೃತ್ತಿ ಬಳಿಕ ಅವರಿಗೆ ಬಂದ ಹಣದ ಜೊತೆಗೆ ಗ್ರಾಮದಲ್ಲಿ ಆಸ್ತಿಯೂ ಇತ್ತು. ಈ ಆಸ್ತಿ ವಿಚಾರವಾಗಿ ಸಿದ್ದಪ್ಪ ಹಾಗೂ ಪುತ್ರಿ ಪ್ರಿಯಾಂಕಾ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ವಿಜಯಪುರದಲ್ಲಿ ವಾಸವಿದ್ದ ಪ್ರಿಯಾಂಕಾಗೆ ಆಟೋ ಚಾಲಕ ಸಂತೋಷ್ ಸಿಂಧೆ ಎಂಬಾತನೊಂದಿಗೆ ಸಂಬಂಧವಿತ್ತು. ಈ ಸಂಬಂಧಕ್ಕೆ ಸಿದ್ದಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಆಸ್ತಿಯಲ್ಲಿ ಪಾಲು ನೀಡಲು ತಂದೆ ನಿರಾಕರಿಸಿದ್ದರು ಎನ್ನಲಾಗಿದೆ.

ಗಲಾಟೆ ಬಳಿಕ ಕೊಲೆ

ಆಗಸ್ಟ್ 15ರಂದು ಆಸ್ತಿ ವಿಚಾರವಾಗಿ ಪ್ರಿಯಾಂಕಾ ಹಾಗೂ ಸಿದ್ದಪ್ಪ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಪ್ರಿಯಾಂಕಾ ತನ್ನ ಪ್ರಿಯಕರ ಸಂತೋಷ್ನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಬಳಿಕ ಇಬ್ಬರೂ ಸೇರಿ ಸಿದ್ದಪ್ಪನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಕಲ್ಲಿನಿಂದ ಹಲ್ಲೆ ಮಾಡಿ, ಮೃತದೇಹವನ್ನು ರಸ್ತೆ ಬದಿ ಬಿಸಾಕಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದೂರು ನೀಡಿದ್ದ ಅಕ್ಕ; ತನಿಖೆಯಲ್ಲಿ ಸತ್ಯ ಬಯಲು

ಆರಂಭದಲ್ಲಿ ಅಪರಿಚಿತ ದುಷ್ಕರ್ಮಿಗಳು ಸಿದ್ದಪ್ಪನನ್ನು ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಸಿದ್ದಪ್ಪನ ಹಿರಿಯ ಪುತ್ರಿ ನಿಖಿತಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣದ ಸತ್ಯ ಹೊರಬಿದ್ದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಸಂತೋಷ್ನನ್ನು ಪೊಲೀಸರು ಬಂಧಿಸಿದ್ದಾರೆ. ಇವರೊಂದಿಗೆ ಭಾಗಿಯಾಗಿದ್ದಾನೆ ಎನ್ನಲಾದ ಸಂತೋಷ್ನ ಸ್ನೇಹಿತ ಗುರುರಾಜ್ ಬಿರಾದಾರ್ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಆಸ್ತಿ ಮತ್ತು ವೈಯಕ್ತಿಕ ಸಂಬಂಧದ ವಿಚಾರಕ್ಕೆ ತಂದೆಯನ್ನೇ ಮಗಳು ಕೊಲೆ ಮಾಡಿರುವ ಆರೋಪ ವಿಜಯಪುರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular