HomeIPL 2026IPL 2026: ಹೇಜಲ್‌ವುಡ್‌, ಬುಮ್ರಾ, ಯಾರಾದರೇನೂ ಬಾರಿಸ್ತಾ ಇರೋದೇ; ಆರ್‌ಸಿಬಿ ಸೋಲಿಸಿದ ಬಳಿಕ ಯಶಸ್ಸಿನ ಗುಟ್ಟು...

IPL 2026: ಹೇಜಲ್‌ವುಡ್‌, ಬುಮ್ರಾ, ಯಾರಾದರೇನೂ ಬಾರಿಸ್ತಾ ಇರೋದೇ; ಆರ್‌ಸಿಬಿ ಸೋಲಿಸಿದ ಬಳಿಕ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ವೈಭವ್

ನಿನ್ನೆ ( ಏಪ್ರಿಲ್ 10 ) ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 16ನೇ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಾಜಸ್ಥಾನ್ ರಾಯಲ್ಸ್ ಸೋಲುಣಿಸಿ ಟೂರ್ನಿಯಲ್ಲಿ ಸತತ ನಾಲ್ಕನೇ ಗೆಲುವನ್ನು ಕಂಡಿತು.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಆಘಾತ ಅನುಭವಿಸಿ ನಾಯಕ ರಜತ್ ಪಟಿದಾರ್ ಅರ್ಧಶತಕ, ಶೆಫರ್ಡ್ ಹಾಗೂ ವೆಂಕಟೇಶ್ ಐಯ್ಯರ್ ಉತ್ತಮ ಆಟದ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 202 ರನ್‌ಗಳ ಸವಾಲಿನ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ ಹಾಗೂ ಧ್ರುವ್ ಜುರೆಲ್ ಅರ್ಧಶತಕಗಳ ನೆರವಿನಿಂದ 18 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಕಲೆಹಾಕಿತು.

ರಾಜಸ್ಥಾನ್ ರಾಯಲ್ಸ್ ಪರ ಟಾಪ್ ಅನುಭವಿಗಳಾದ ಜೈಸ್ವಾಲ್, ಶಿಮ್ರಾನ್ ಹೆಟ್ಮಾಯೆರ್ ಹಾಗೂ ನಾಯಕ ರಿಯಾನ್ ಪರಾಗ್ ವಿಫಲರಾದರು. ಆದರೆ ವೈಭವ್ ಸೂರ್ಯವಂಶಿಯ ಅಬ್ಬರದ ಆರಂಭ ಹಾಗೂ ಧ್ರುವ್ ಜುರೆಲ್ ಪಂದ್ಯ ಗೆಲ್ಲಿಸಿದ ಇನ್ನಿಂಗ್ಸ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಂಡಕ್ಕೆ ಬೇಕಿದ್ದ ಸ್ಪೋಟಕ ಆರಂಭವನ್ನು ಕಟ್ಟಿಕೊಟ್ಟ ವೈಭವ್ ಮೊದಲ ಓವರ್‌ನಲ್ಲೇ ಭುವನೇಶ್ವರ್ ಕುಮಾರ್‌ಗೆ ಎರಡು ಬೌಂಡರಿ ಹಾಗೂ ನಾಲ್ಕನೇ ಓವರ್‌ನಲ್ಲಿ ಹೇಜಲ್‌ವುಡ್‌ಗೆ ಹ್ಯಾಟ್ರಿಕ್ ಬೌಂಡರಿ ಹಾಗೂ 1 ಸಿಕ್ಸರ್ ಚಚ್ಚಿ ತಾನು ಯಾವ ಬೌಲರ್‌ಗೂ ತಲೆಕೆಡಿಸಿಕೊಳ್ಳುವುದಿಲ್ಲ ಹಾಗೂ ಹೆಸರುವುದಿಲ್ಲ ಎಂಬ ಸ್ಪಷ್ಟ ಸಂದೇಶ ಸಾರಿದರು.

ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಆಸೆಗೆ ತಣ್ಣೀರು ಸುರಿದ ವೈಭವ್ ಸೂರ್ಯವಂಶಿ ಪಂದ್ಯದ ಬಳಿಕ ಮಾತನಾಡಿದ್ದು ತಾನು ಭಯವಿಲ್ಲದೇ ಬ್ಯಾಟಿಂಗ್ ಮಾಡಿದ್ದರ ಕುರಿತು ತಿಳಿಸಿದ್ದಾರೆ. ‘ಭಯವಿಲ್ಲದೇ ಬ್ಯಾಟ್ ಬೀಸುವುದನ್ನು ನಾನು ಅಭ್ಯಾಸದಲ್ಲಿಯೂ ಸಹ ಮಾಡುತ್ತೇನೆ. ಹಾಗಾಗಿ ಅದು ನನ್ನ ಸ್ವಾಭಾವಿಕ ಆಟ. ಅದೇ ಕೆಲಸವನ್ನು ಇಲ್ಲಿಯೂ ಮಾಡಿದ್ದೇನೆ. ತಲೆಯ ಹಿಂದೆ ಬೌಲರ್ ನನ್ನ ಮೆದುಳು ಬೌಲಿಂಗ್ ಮಾಡುತ್ತಿರುವುದು ಯಾರೆಂದು ತಿಳಿಸುತ್ತದೆ. ಆದರೆ ನಾನು ಬೌಲರ್ ಯಾರೆಂದು ನೋಡದೇ ಚೆಂಡನ್ನು ಬಾರಿಸುವತ್ತ ಗಮನಹರಿಸುತ್ತೇನೆ’ ಎಂದು ಹೇಳುವ ಮೂಲಕ ವೈಭವ್ ದೊಡ್ಡ ಬೌಲರ್‌ಗಳಾದ ಬುಮ್ರಾ ಹಾಗೂ ಹೇಜಲ್‌ವುಡ್‌ ಯಾರಿದ್ದರೂ ಅದೇ ಆಟ ಆಡುತ್ತೇನೆಂದು ತಿಳಿಸಿದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular