HomeKarnatakaಮಹಾವೀರ ಜಯಂತಿ ಸಾರ್ವತ್ರಿಕ ರಜಾ ದಿನ ಬದಲಾವಣೆ

ಮಹಾವೀರ ಜಯಂತಿ ಸಾರ್ವತ್ರಿಕ ರಜಾ ದಿನ ಬದಲಾವಣೆ

ಬೆಂಗಳೂರು: ಭಗವಾನ್ ಶ್ರೀ ಮಹಾವೀರ ಜಯಂತಿ ಆಚರಣಗೆ ನಿಗದಿ ಪಡಿಸಿರುವ ಸಾರ್ವತ್ರಿಕ ರಜಾ ದಿನವನ್ನು 31.03.2026 ರ ಬದಲಾಗಿ 30.03.2026 ಎಂದು ಮಾರ್ಪಡಿಸುವ ಕುರಿತು ಆದೇಶ ಹೊರಡಿಸಲಾಗಿದೆ.

ಭಗವಾನ್ ಶ್ರೀ ಮಹಾವೀರ ಜಯಂತಿ ಆಚರಣಗೆ ನಿಗದಿಪಡಿಸಿರುವ ಸಾರ್ವತ್ರಿಕ ರಜಾ ದಿನವನ್ನು 31.03.2026 ರ ಬದಲಾಗಿ 30.03.2026 ಎಂದು ಮಾರ್ಪಡಿಸಿ ತಿದ್ದುಪಡಿ ಆದೇಶ ಹೊರಡಿಸುವ ಬಗ್ಗೆ ಪರಿಶೀಲಿಸಿ ಸ್ಪಷ್ಟ ಅಭಿಪ್ರಾಯ/ಶಿಫಾರಸ್ಸಿನೊಂದಿಗೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಲು ಉಲ್ಲೇಖಿತ ಪತ್ರದಲ್ಲಿ ಸೂಚಿಸಲಾಗಿರುತ್ತದೆ

ಈ ಕುರಿತು ಈ ಕಛೇರಿಯ ಆಗಮ ಪಂಡಿತರು ಪರಿಶೀಲಿಸಿ ಈ ಕೆಳಕಂಡಂತೆ ಅಭಿಪ್ರಾಯ ನೀಡಿರುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಜಯಂತಿಯನ್ನು ನಿಗದಿಪಡಿಸುವಾಗ ಅವರವರ ಸಂಪ್ರದಾಯಕ್ಕೆ ಅನುಸಾರವಾಗಿ ನಿಗದಿಪಡಿಸಲಾಗುತ್ತದೆ. ಅಂದರೆ ಸೂರ್ಯ ಉದಯವಾಗುವ ಕಾಲದಲ್ಲಿ ಯಾವ ತಿಥಿ ಅಥವಾ ನಕ್ಷತ್ರಗಳು ಇರುತ್ತವೆಯೋ ಅದನ್ನು ಕೆಲವರು ಪ್ರಧಾನವಾಗಿ ಪರಿಗಣಿಸುತ್ತಾರೆ. ಮತ್ತೆ ಕೆಲವರು ಪೂರ್ಣ ದಿನ ಇರುವ ತೀಥಿಯನ್ನು ಸ್ವೀಕರಿಸುತ್ತಾರೆ. ಈ ರೀತಿ ಎರಡು ವಿಧವಾಗಿ ಆಚರಣೆ ಮಾಡಲಾಗುತ್ತದೆ.

ಪ್ರಸ್ತುತ ಈ ಹಿಂದೆ ನೀಡಲಾಗಿರುವ ಪ್ರಸ್ತಾಪಿತ ಮಹಾವೀರ ಜಯಂತಿಯು ಪರಿಗಣಿಸಲಾಗಿದ್ದು, ಸದರಿ ತಿಥಿಯು ದಿನಾಂಕ: 30.03.2026 ರ ಬೆಳಿಗ್ಗೆ ಪ್ರಾರಂಭಗೊಂಡು ದಿನಾಂಕ: 31.03.2026 ರಂದು ಬೆಳಗ್ಗೆ 07 ಗಂಟೆಯ ವರೆಗೆ ಸೂರ್ಯೋದಯಕ್ಕೆ ತ್ರಯೋದಶಿ ತಿಥಿಯು ಇದ್ದ ಕಾರಣ ಅದರೊಂದಿಗೆ ಅರುಣೋದಯವು ಸೇರಿರುವುದರಿಂದ ಇದನ್ನು ಮುಖ್ಯವೆಂದು ಪರಿಗಣಿಸಿ ಸದರಿ ಜಯಂತಿಯನ್ನು ನಿಗದಿಪಡಿಸಲಾಗಿತ್ತು.

ತ್ರಯೋದಶಿ ಶುಕ್ಲ ಎಂದು ಆದರೆ ಸದರಿ ಮಹಾವೀರ ಜಯಂತಿಯು ಜೈನ ಸಂಪ್ರದಾಯದ ಗುರುಗಳಾಗಿದ್ದು, ಈ ಸಂಪ್ರದಾಯಸ್ಥರಿಗೆ ಸದರಿ ಮಹಾವೀರ ಮುನಿಗಳು ಮುಖ್ಯವಾಗುವುದರಿಂದ ಜೈನ ಸಂಪ್ರದಾಯದ ಜ್ಯೋತಿಷ್ಯಗಳು ಮತ್ತು ಮುಖಂಡರು ಅವರ ಸಂಪ್ರದಾಯದಂತೆ ದಿನಾಂಕ: 30.03.2026 ರಂದು ಸದರಿ ಮಹಾವೀರ ಜಯಂತಿಯನ್ನು ಆಚರಿಸುವ ಸಲುವಾಗಿ ಸರ್ಕಾರದ ಸಾರ್ವತ್ರಿಕ ರಜೆಯನ್ನು ಘೋಷಿಸಲು ಕೋರಿರುವುದರಿಂದ ಸದರಿ ದಿನದಂದು ಅಚರಿಸುವ ಶಿಫಾರಸ್ಸು ಸಂಬಂಧ ಸರ್ಕಾರಕ್ಕೆ ಮಾಡಬಹುದಾಗಿರುತ್ತದೆ.

ಈ ಕಛೇರಿಯ ಆಗಮ ಪಂಡಿತರ ಅಭಿಪ್ರಾಯದ ಹಿನ್ನೆಲೆಯಲ್ಲಿ ಶ್ರೀ ಮಹಾವೀ‌ರ್ ಜಯಂತಿ ನಿಮಿತ್ತ ಸಾರ್ವತ್ರಿಕ ರಜಾ ದಿನವನ್ನು ದಿನಾಂಕ:31.03.2026 ರ ಬದಲಿಗೆ ದಿನಾಂಕ:30.03.2026 ರಂದು ಮಾರ್ಪಡಿಸಬಹುದಾಗಿರುತ್ತದೆ ಎಂಬ ಅಂಶವನ್ನು ವರದಿ ಮಾಡಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular