HomeLatest News'ರಾಜ್ಯ ಸರ್ಕಾರಿ' ನೌಕರರಿಗೆ ಗುಡ್ ನ್ಯೂಸ್ :  'ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ' ತೇರ್ಗಡೆ ಕಡ್ಡಾಯ ಅವಧಿ...

‘ರಾಜ್ಯ ಸರ್ಕಾರಿ’ ನೌಕರರಿಗೆ ಗುಡ್ ನ್ಯೂಸ್ :  ‘ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ’ ತೇರ್ಗಡೆ ಕಡ್ಡಾಯ ಅವಧಿ ವಿಸ್ತರಣೆ

ಬೆಂಗಳೂರು :  ಕರ್ನಾಟಕ ರಾಜ್ಯ ನಾಗರಿಕ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ಈ ಹಿಂದಿನ ನಿಯಮದಂತೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಪೂರೈಸಲು ನೀಡಲಾಗಿದ್ದ ಗಡುವನ್ನು ವಿಸ್ತರಿಸಲಾಗಿದೆ.

ಪ್ರಮುಖ ಅಂಶಗಳು:

ಗಡುವು ವಿಸ್ತರಣೆ: ಈ ಮೊದಲು ಪರೀಕ್ಷೆ ಪಾಸು ಮಾಡಲು 31.12.2025 ರವರೆಗೆ ಕಾಲಾವಕಾಶವಿತ್ತು. ಈಗ ಅದನ್ನು ಒಂದು ವರ್ಷ ಮುಂದೂಡಿ 31.12.2026 ರವರೆಗೆ ವಿಸ್ತರಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೂರ್ವಾನ್ವಯ ಜಾರಿ: ಈ ಹೊಸ ತಿದ್ದುಪಡಿಯು 01.01.2026 ರಿಂದಲೇ ಜಾರಿಗೆ ಬರುವಂತೆ ಪರಿಗಣಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಧಿಕೃತ ಆದೇಶ: ಈ ಆದೇಶವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಸೇವಾ ನಿಯಮಗಳು-3) ಸರ್ಕಾರದ ಅಧೀನ ಕಾರ್ಯದರ್ಶಿಯವರು ಹೊರಡಿಸಿದ್ದಾರೆ.

ನಿಯಮಗಳು:

  1. ಶೀರ್ಷಿಕೆ ಮತ್ತು ಪ್ರಾರಂಭ: (1) ಈ ನಿಯಮಗಳನ್ನು ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) (ತಿದ್ದುಪಡಿ) ನಿಯಮಗಳು, 2026 ಎಂದು ಕರೆಯತಕ್ಕದ್ದು. (2) ಈ ನಿಯಮಗಳು ಅಧಿಕೃತ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
  2. ನಿಯಮ 2ಕ್ಕೆ ತಿದ್ದುಪಡಿ: ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು, 2012ರ ನಿಯಮ 2ರಲ್ಲಿ “31.12.2025 ರೊಳಗೆ” ಎಂಬ ಪದ ಮತ್ತು ಅಂಕಿಗಳ ಬದಲಿಗೆ “31.12.2026 ರೊಳಗೆ“ ಎಂಬ ಪದ ಮತ್ತು ಅಂಕಿಗಳನ್ನು ದಿನಾಂಕ: 01.01.2026 ರಿಂದ ಜಾರಿಗೆ ಬಂದಿವೆ ಎಂದು ಭಾವಿಸಿ ಪ್ರತಿಸ್ಥಾಪಿಸತಕ್ಕದ್ದು.
  3. ನಿಯಮ 3ಕ್ಕೆ ತಿದ್ದುಪಡಿ: ಸದರಿ ನಿಯಮಗಳ ನಿಯಮ 3ರಲ್ಲಿ,- (ಎ) ಉಪ ನಿಯಮ (1) ರಲ್ಲಿ “31.12.2025 ರೊಳಗೆ” ಎಂಬ ಪದ ಮತ್ತು ಅಂಕಿಗಳ ಬದಲಿಗೆ “31.12.2026 ರೊಳಗೆ“ ಎಂಬ ಪದ ಮತ್ತು ಅಂಕಿಗಳನ್ನು ದಿನಾಂಕ: 01.01.2026 ರಿಂದ ಜಾರಿಗೆ ಬಂದಿವೆ ಎಂದು ಭಾವಿಸಿ ಪ್ರತಿಸ್ಥಾಪಿಸತಕ್ಕದ್ದು. (ಬಿ) ಉಪ ನಿಯಮ (2) ರಲ್ಲಿ “31.12.2025 ರೊಳಗೆ” ಎಂಬ ಪದ ಮತ್ತು ಅಂಕಿಗಳ ಬದಲಿಗೆ “31.12.2026 ರೊಳಗೆ“ ಎಂಬ ಪದ ಮತ್ತು ಅಂಕಿಗಳನ್ನು ದಿನಾಂಕ: 01.01.2026 ರಿಂದ ಜಾರಿಗೆ ಬಂದಿವೆ ಎಂದು ಭಾವಿಸಿ ಪ್ರತಿಸ್ಥಾಪಿಸತಕ್ಕದ್ದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular