HomeEntertainmentಮಹಾರಾಜ ಟ್ರೋಫಿ; ಇಂದು ಫೈನಲ್ ನಲ್ಲಿ ಮುಖಾಮುಖಿಯಾಗಲಿವೆ ಮೈಸೂರ್ ವಾರಿಯರ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್

ಮಹಾರಾಜ ಟ್ರೋಫಿ; ಇಂದು ಫೈನಲ್ ನಲ್ಲಿ ಮುಖಾಮುಖಿಯಾಗಲಿವೆ ಮೈಸೂರ್ ವಾರಿಯರ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್

ನಿನ್ನೆ ನಡೆದ ಮಹಾರಾಜ ಟ್ರೋಫಿಯ ಸೆಮಿ ಫೈನಲ್ ಪಂದ್ಯದಲ್ಲಿ ಮೈಸೂರ್ ವಾರಿಯರ್ಸ್ ತಂಡ ಹುಬ್ಬಳ್ಳಿ ಟೈಗರ್ಸ್ ಎದುರು ಕೇವಲ ಒಂಬತ್ತು ರನ್ ಗಳಿಂದ ರೋಚಕ ಜಯ ಸಾಧಿಸಿದ್ದು, ಫೈನಲ್ ಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಮಹಾರಾಜ ಟ್ರೋಪಿಯ ಮೊದಲನೇ ಹಾಗೂ ಎರಡನೇ ಆವೃತ್ತಿಯ ಚಾಂಪಿಯನ್ ಗಳಾದ ಗುಲ್ಬರ್ಗ ಮೈಸ್ಟಿಕ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ನ ಫೈನಲ್ ಕನಸು ನುಚ್ಚುನೂರಾಗಿದೆ.

ಮಹಾರಾಜ ಟ್ರೋಫಿಯಲ್ಲಿ ರನ್ನರ್ ಆಫ್ ಆಗಿದ್ದ ಮೈಸೂರು ವಾರಿಯರ್ಸ್ ಮತ್ತು ಬೆಂಗಳೂರು ಬ್ಲಾಸ್ಟರ್ಸ್ ಇದೀಗ ಫೈನಲ್ ನಲ್ಲಿ  ಮುಖಾಮುಖಿಯಾಗುತ್ತಿದ್ದು, ಉಭಯ ತಂಡಗಳು ಮೊದಲ ಟ್ರೋಫಿಯ  ನಿರೀಕ್ಷೆಯಲ್ಲಿವೆ. ಇಂದು ಮಹಾರಾಜ ಟ್ರೋಫಿಯನ್ನು ಯಾವ ತಂಡ  ಎತ್ತಿ ಹಿಡಿಯಲಿದೆ ಕಾದು ನೋಡಬೇಕಾಗಿದೆ. ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಪಾರ ಸಂಖ್ಯೆಯ ಪ್ರೇಕ್ಷಕರು ಸೇರುವ ಸಾಧ್ಯತೆ ಹೆಚ್ಚಿದೆ.

For Latest News Updates, Join Our Whatsapp Community🚩
RELATED ARTICLES

Most Popular