HomeLatest News6 ತಿಂಗಳ ಹಿಂದಿನ ಕೊಲೆ ರಹಸ್ಯ ಬಯಲು ಮಾಡಿದ ಟ್ಯಾಂಕ್ ನಲ್ಲಿ ಪತ್ತೆಯಾದ ತಲೆಬುರುಡೆ

6 ತಿಂಗಳ ಹಿಂದಿನ ಕೊಲೆ ರಹಸ್ಯ ಬಯಲು ಮಾಡಿದ ಟ್ಯಾಂಕ್ ನಲ್ಲಿ ಪತ್ತೆಯಾದ ತಲೆಬುರುಡೆ

ಭೋಪಾಲ್: ಮನೆ ಹಿಂದಿನ ಸೆಪ್ಟಿಕ್ ಟ್ಯಾಂಕ್ ನಲ್ಲಿ ಪತ್ತೆಯಾಗಿದ್ದ ತಲೆಬುರುಡೆ ಆರು ತಿ<ಗಳ ಹಿಂದಿನ ಕೊಲೆ ರಹಸ್ಯವನ್ನು ಬಯಲು ಮಾಡಿದೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಆಗಸ್ಟ್​ 20ರಂದು ಪ್ರಿನ್ಸ್​ ಎಂಬುವವರು ಏಕಾಏಕಿ ನಾಪತ್ತೆ ಯಾಗಿದ್ದರು. ಪತ್ನಿ ತುಳಸಿ ಪತಿ ನಾಪತ್ತೆಯಾಗಿದ್ದಾಗಿ ದೂರು ನೀಡಿದ್ದರು. ಆರಂಭದಲ್ಲಿ ಪೊಲೀಸರಿಗೆ ಯಾವುದೇ ಸುಳಿವು ಸಿಗದ ಕಾರಣ ಸದ್ದಿಲ್ಲದೆ ಪ್ರಕರಣದ ವಿಚಾರಣೆ ಅಂತ್ಯ ಕಂಡಿತ್ತು. ಆದರೆ ಕುಟುಂಬದವರಿಗೆ ಅನುಮಾನವಿತ್ತು.

ಸೆಪ್ಟಿಕ್ ಟ್ಯಾಂಕ್​​ನಲ್ಲಿ ಸಿಕ್ಕ ತಲೆ ಬುರುಡೆ, ಮೂಳೆಗಳು ಕುಟುಂಬದವರನ್ನು ಬೆಚ್ಚಿ ಬೀಳಿಸಿತ್ತು. ಪ್ರಕರಣದ ತನಿಖೆ ಮತ್ತೆ ಆರಂಭಿಸಿದ ಪೊಲೀಸರು ಆರೋಪಿ ಶೋಯೆಬ್​​ನನ್ನು ನರಸಿಂಗ್​ಪುರದಲ್ಲಿ ಬಂಧಿಸಿ ವಿಚಾರಣೆ ನಡೆಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಚಾರಣೆಯ ಸಮಯದಲ್ಲಿ ತುಳಸಿ ಹಾಗೂ ಶೋಯೆಬ್​ಗೆ ಮದುವೆಗೂ ಮುಂಚೆಯೇ ಸಂಬಂಧವಿತ್ತು ಎಂಬುದು ತಿಳಿದುಬಂದಿದೆ. ತುಳಸಿ ಪತಿ ಪ್ರಿನ್ಸ್​ಗೆ ಮಾದಕ ದ್ರವ್ಯ ನೀಡಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮದುವೆಯ ನಂತರವೂ ಅಕ್ರಮ ಸಂಬಂಧ ಮುಂದುವರೆದಿದೆ.

ಮದುವೆಯಾದ ಒಂದು ತಿಂಗಳಿಗೆ ತುಳಸಿಯ ನಡವಳಿಕೆ ಬದಲಾಯಿತು, ಮನೆಯಲ್ಲಿ ಆಗಾಗ ಜಗಳಗಳು ನಡೆಯುತ್ತಿದ್ದವು, ಇಬ್ಬರೂ ಆಕೆಯ ಪೋಷಕರ ಮನೆಯಲ್ಲಿರಬೇಕೆಂದು ದಿಯೋರಿಗೆ ತೆರಳಿದ್ದರು. ನಂತರ ನಡೆದಿದ್ದು ಈ ಕೊಲೆ, ಶೋಯೆಬ್ ಪ್ರಿನ್ಸ್ ದೇವೋರಿಯಲ್ಲಿ ವಾಸಿಸುತ್ತಿದ್ದಾಗ ಅವನೊಂದಿಗೆ ಸ್ನೇಹ ಬೆಳೆಸಿದ್ದ ಎನ್ನಲಾಗಿದೆ. ಪದೇ ಪದೇ ಪ್ರಿನ್ಸ್​​ಗೆ ಮಾದಕ ದ್ರವ್ಯ ನೀಡುತ್ತಿದ್ದ. ಶೋಯೆಬ್ ತುಳಸಿಯನ್ನು ರಹಸ್ಯವಾಗಿ ಭೇಟಿಯಾಗುತ್ತಿದ್ದ. ಪ್ರಿನ್ಸ್​​ಗೆ ಈ ವಿಚಾರ ತಿಳಿದಾಗ ಇಬ್ಬರ ಸಂಬಂಧದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ.

ಆಗಸ್ಟ್ 20 ರಂದು ಪ್ರಿನ್ಸ್‌ಗೆ ಮಾದಕ ದ್ರವ್ಯ ನೀಡಿ ಕೊಲೆ ಮಾಡಲಾಗಿದೆ. ಅನುಮಾನ ಬರದಂತೆ ಶವವನ್ನು ತನ್ನ ಮನೆಯ ಹಿಂದಿನ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದು ಕಸದಿಂದ ಮುಚ್ಚಿದ್ದಾನೆ ಶೋಯಬ್ ಪೊಲೀಸರು ಶೋಯೆಬ್ ನನ್ನು ಅಪರಾಧ ಸ್ಥಳಕ್ಕೆ ಕರೆದೊಯ್ದು ಸೆಪ್ಟಿಕ್ ಟ್ಯಾಂಕ್ ಅನ್ನು ತೆಗೆದು, ತಲೆಬುರುಡೆ ಮತ್ತು ಇತರ ಅವಶೇಷಗಳನ್ನು ವಶಪಡಿಸಿಕೊಂಡರು. ಅವರ ಗುರುತನ್ನು ದೃಢೀಕರಿಸಲು ಅವಶೇಷಗಳನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular