HomeEntertainment'ತೋತಾಪುರಿ 2' ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

‘ತೋತಾಪುರಿ 2’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಕಳೆದ ವರ್ಷ ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದ ತೋತಾಪುರಿ ಸಿನಿಮಾದ ಮತ್ತೊಂದು ಭಾಗ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ.

ನಿನ್ನೆ ‘ತೋತಾಪುರಿ 2’ ಚಿತ್ರದ ಲಿರಿಕಲ್ ಸಾಂಗ್ ಅನ್ನು ಮೋನಿಪ್ಲಿಕ್ಸ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ಕಣ್ಣಾಗೆ ಇರ್ತಾವ್ನೆ ಈರೇಗೌಡ’ ಎಂಬ ಈ ಹಾಡಿಗೆ ಹೇಮಂತ್ ಕುಮಾರ್ ಧ್ವನಿಯಾಗಿದ್ದು, ಅರುಣ್  ಸಂಗೀತ ಸಂಯೋಜನೆ ಮಾಡಿದ್ದಾರೆ.  ಹೃದಯಶಿವ ಅವರ ಸಾಹಿತ್ಯವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಜಯ್ ಪ್ರಸಾದ್ ನಿರ್ದೇಶನದ ರೋಮ್ಯಾಂಟಿಕ್ ಕಾಮಿಡಿ ಕಥಾಂದರ ಹೊಂದಿರುವ ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಸೇರಿದಂತೆ ಅದಿತಿ ಪ್ರಭುದೇವ, ಸುಮನ್ ರಂಗನಾಥ್, ಡಾಲಿ ಧನಂಜಯ್  ಬಣ್ಣ ಹಚ್ಚಿದ್ದಾರೆ. ಸುರೇಶ್ ಆರ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಮೋನಿ ಪ್ಲಿಕ್ಸ್ ಸ್ಟುಡಿಯೋಸ್ ಲಾಂಛನದಲ್ಲಿ ಕೆ ಸುರೇಶ್ ನಿರ್ಮಾಣ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular