HomeLatest Newsಜಸ್ಟ್  100 ರೂ.ಗೆ ರೈಲ್ವೇ ನಿಲ್ದಾಣಗಳಲ್ಲಿ ಐಷಾರಾಮಿ ಕೊಠಡಿಗಳು.!. ಬುಕ್ ಮಾಡುವುದು ಹೇಗೆ ?

ಜಸ್ಟ್  100 ರೂ.ಗೆ ರೈಲ್ವೇ ನಿಲ್ದಾಣಗಳಲ್ಲಿ ಐಷಾರಾಮಿ ಕೊಠಡಿಗಳು.!. ಬುಕ್ ಮಾಡುವುದು ಹೇಗೆ ?

ಭಾರತೀಯ ರೈಲ್ವೆಯು ದೇಶದ ಅತಿದೊಡ್ಡ ಸಾರಿಗೆ ವ್ಯವಸ್ಥೆಯಾಗಿದೆ ಮತ್ತು ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ರೈಲ್ವೆ ದರಗಳು ಕಡಿಮೆ ಇರುವುದರಿಂದ ಸಾಮಾನ್ಯ ಜನರಿಂದ ಹಿಡಿದು ಉನ್ನತ ವರ್ಗದವರೆಗೆ ಪ್ರತಿಯೊಬ್ಬರೂ ರೈಲು ಪ್ರಯಾಣದ ಮೇಲೆ ಆಸಕ್ತಿ ತೋರಿಸುತ್ತಾರೆ. ದೂರದ ಪ್ರಯಾಣ ಮಾತ್ರವಲ್ಲದೆ, ಸಣ್ಣ ಪ್ರಯಾಣಗಳಿಗೂ ಹೆಚ್ಚಿನ ಜನರು ರೈಲನ್ನೇ ಆರಿಸಿಕೊಳ್ಳುತ್ತಾರೆ. ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆಯು ಕಾಲಕಾಲಕ್ಕೆ ಸೌಲಭ್ಯಗಳನ್ನು ಸುಧಾರಿಸುತ್ತಿರುತ್ತದೆ ಮತ್ತು ಹೊಸ ಸೇವೆಗಳನ್ನು ಪರಿಚಯಿಸುತ್ತಿರುತ್ತದೆ. ರೈಲ್ವೆ ಒದಗಿಸುವ ಸೌಲಭ್ಯಗಳಲ್ಲಿ ಪ್ರಮುಖವಾದುದು ರೈಲ್ವೆ ನಿಲ್ದಾಣಗಳಲ್ಲಿ ನೀಡಲಾಗುವ ‘ರಿಟೈರಿಂಗ್ರೂಮ್ಸ್’ (ವಿಶ್ರಾಂತಿಕೊಠಡಿಗಳು) ಸೌಲಭ್ಯ.

ರೈಲು ಪ್ರಯಾಣಕ್ಕೆ ಇನ್ನು ಸಮಯವಿದ್ದಾಗ ವಿಶ್ರಾಂತಿ ಪಡೆಯಲು ಈ ಕೊಠಡಿಗಳು ಬಹಳ ಉಪಯುಕ್ತವಾಗಿವೆ. ರೈಲು ವಿಳಂಬವಾದಾಗ, ಕನೆಕ್ಟಿಂಗ್ ಟ್ರೈನ್ ಪಡೆಯಲು ಗಂಟೆಗಟ್ಟಲೆ ಕಾಯಬೇಕಾದಾಗ ಅಥವಾ ರಾತ್ರಿ ವೇಳೆ ನಿಲ್ದಾಣಕ್ಕೆ ತಲುಪಿದಾಗ ಸುರಕ್ಷಿತವಾಗಿ ಉಳಿದುಕೊಳ್ಳಲು ಈ ಕೊಠಡಿಗಳು ಸಹಾಯ ಮಾಡುತ್ತವೆ.

ಸಾಮಾನ್ಯವಾಗಿ ನಿಲ್ದಾಣದ ಹೊರಗೆ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಬೇಕೆಂದರೆ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ವಿಶೇಷವಾಗಿ ಎಸಿ ಅಥವಾ ಎಲ್ಲಾ ಸೌಕರ್ಯವಿರುವ ಕೊಠಡಿ ಬೇಕೆಂದರೆ ಸಾವಿರಾರು ರೂಪಾಯಿ ಬೇಕಾಗುತ್ತದೆ. ಆದರೆ ರೈಲ್ವೆ ನಿಲ್ದಾಣದ ಒಳಗೇ ಅತ್ಯಂತ ಕಡಿಮೆ ದರದಲ್ಲಿ ಉತ್ತಮ ಸೌಲಭ್ಯವಿರುವ ರಿಟೈರಿಂಗ್ ರೂಮ್‌ಗಳು ಲಭ್ಯವಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇವಲ100 ರೂಪಾಯಿಗೆ ರಿಟೈರಿಂಗ್ ರೂಮ್‌

ರೈಲ್ವೆ ನಿಲ್ದಾಣಗಳಲ್ಲಿ ಕೇವಲ 100 ರೂಪಾಯಿಯಿಂದ ರಿಟೈರಿಂಗ್ ರೂಮ್‌ಗಳು ಲಭ್ಯವಿವೆ. ಇವು ಪ್ರಯಾಣಿಕರಿಗಾಗಿ ವಿಶೇಷವಾಗಿ ರೂಪಿಸಲಾದ ವಿಶ್ರಾಂತಿ ಕೊಠಡಿಗಳಾಗಿವೆ. ಕಡಿಮೆ ವೆಚ್ಚದಲ್ಲಿ ಉತ್ತಮ ಕೊಠಡಿ, ಬೆಡ್ ಮತ್ತು ಸ್ನಾನಗೃಹದ ಸೌಲಭ್ಯಗಳು ಸಿಗುತ್ತವೆ. ಕೆಲವು ಪ್ರಮುಖ ನಿಲ್ದಾಣಗಳಲ್ಲಿ ಎಸಿ ಕೊಠಡಿಗಳೂ ಲಭ್ಯವಿವೆ.

ಕೊಠಡಿಗಳನ್ನು ಬುಕ್ ಮಾಡುವುದು ಹೇಗೆ?

ರೈಲ್ವೆ ನಿಲ್ದಾಣಗಳಲ್ಲಿ ಕೊಠಡಿಗಳನ್ನು ಬುಕ್ ಮಾಡುವುದು ಬಹಳ ಸುಲಭ:

ಮೊದಲು IRCTC ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮ್ಮ ಟಿಕೆಟ್ ವಿವರಗಳೊಂದಿಗೆ ಲಾಗಿನ್ ಆಗಿ.

ಅಲ್ಲಿ ಕಾಣಿಸುವ “Retiring Rooms” ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

ನಿಮ್ಮ PNR ಸಂಖ್ಯೆಯನ್ನು ನಮೂದಿಸಿ, ಬೇಕಾದ ನಿಲ್ದಾಣ, ಚೆಕ್-ಇನ್ ಮತ್ತು ಚೆಕ್-ಔಟ್ ಸಮಯವನ್ನು ಆಯ್ಕೆ ಮಾಡಿ.

ಆಗ ಲಭ್ಯವಿರುವ ಕೊಠಡಿಗಳ ವಿವರಗಳು ಪರದೆಯ ಮೇಲೆ ಕಾಣಿಸುತ್ತವೆ.

ನಿಮಗೆ ಇಷ್ಟವಾದ ಕೊಠಡಿಯನ್ನು ಆಯ್ಕೆ ಮಾಡಿ ಆನ್‌ಲೈನ್ ಮೂಲಕ ಹಣ ಪಾವತಿಸಿ ಬುಕ್ ಮಾಡಬಹುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular