HomeUncategorizedSHOCKING : ಪತ್ನಿ, ಸಹೋದರಿಗೆ ಗುಂಡಿಕ್ಕಿ ಕೊಂದು ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ ; ಭಯಾನಕ ವೀಡಿಯೋ...

SHOCKING : ಪತ್ನಿ, ಸಹೋದರಿಗೆ ಗುಂಡಿಕ್ಕಿ ಕೊಂದು ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ ; ಭಯಾನಕ ವೀಡಿಯೋ ವೈರಲ್ |WATCH VIDEO

ಲಖನೌನ ಗೋಮತಿ ನಗರದಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬರು ತಮ್ಮ ಪತ್ನಿಯನ್ನು ಆಕೆಯ ಕೆಲಸದ ಸ್ಥಳದ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ, ತಮ್ಮ ಕಿರಿಯ ಸಹೋದರಿಯನ್ನೂ ಕೊಂದು ತಾವು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎಸ್‌ಬಿಐ ಬ್ಯಾಂಕ್ ಉದ್ಯೋಗಿ ಮಾನಸ್ ವಾಜಪೇಯಿ, ಐಸಿಐಸಿಐ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಪತ್ನಿ ದಿವ್ಯಾ ಮಿಶ್ರಾ ಅವರನ್ನು ಬ್ಯಾಂಕ್‌ಗೆ ಪ್ರವೇಶಿಸುವುದನ್ನು ತಡೆದು, ಅವರೊಂದಿಗೆ ಕೆಲ ನಿಮಿಷ ಮಾತನಾಡಿದ್ದಾರೆ. ಬಳಿಕ ಆಕೆಯ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಘಟನೆ ಮಧ್ಯಾಹ್ನದ ವೇಳೆಯಲ್ಲಿ ಗೋಮತಿ ನಗರದ ಪ್ರತಿಷ್ಠಿತ ಪ್ರದೇಶದಲ್ಲಿ ನಡೆದಿದೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ದಿವ್ಯಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬ್ಯಾಂಕ್‌ ಹೊರಗೆ ನಡೆದ ಗಲಾಟೆ ಸಿಸಿಟಿವಿಯಲ್ಲಿ ಸೆರೆ

ಸಿಸಿಟಿವಿ ದೃಶ್ಯಗಳ ಪ್ರಕಾರ, ಮಾನಸ್ ಬ್ಯಾಂಕ್‌ನ ಪ್ರವೇಶ ದ್ವಾರದ ಬಳಿ ದಿವ್ಯಾ ಅವರನ್ನು ದೈಹಿಕವಾಗಿ ತಡೆದಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, 38 ವರ್ಷದ ಮಾನಸ್ ಪತ್ನಿಯನ್ನು ಬ್ಯಾಂಕ್‌ನ ಹೊರಗೆ ಕರೆಸಿ ಮಾತನಾಡಿದ ಬಳಿಕ ಗುಂಡು ಹಾರಿಸಿದ್ದಾರೆ.

ಗಲಾಟೆ ಆರಂಭವಾಗುತ್ತಿದ್ದಂತೆ ಬ್ಯಾಂಕ್‌ನ ಕೆಲವು ಸಿಬ್ಬಂದಿ ಹೊರಗೆ ಬಂದಿದ್ದಾರೆ. ಮಾನಸ್ ದಿವ್ಯಾ ಮೇಲೆ ಹಲ್ಲೆ ನಡೆಸಿದ ಬಳಿಕ ಸಿಬ್ಬಂದಿ ಮತ್ತೆ ಬ್ಯಾಂಕ್‌ನೊಳಗೆ ತೆರಳಿದ್ದಾರೆ. ಇದೇ ವೇಳೆ ಆತ ದಿವ್ಯಾ ಮೇಲೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.

12 ವರ್ಷಗಳ ದಾಂಪತ್ಯ; ಒಂದು ವರ್ಷದಿಂದ ಪ್ರತ್ಯೇಕ ವಾಸ

ಮಾನಸ್ ಮತ್ತು ದಿವ್ಯಾ 12 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ದಿವ್ಯಾ ಕಳೆದ ವರ್ಷ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.

ಮಾನಸ್, ದಿವ್ಯಾ ತಮ್ಮೊಂದಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ ಎನ್ನಲಾಗಿದೆ.

ಸಹೋದರಿಯನ್ನೂ ಕೊಂದು ಬಳಿಕ ಆತ್ಮಹತ್ಯೆ

ದಿವ್ಯಾ ಮೇಲೆ ಗುಂಡು ಹಾರಿಸಿದ ಕೆಲವೇ ನಿಮಿಷಗಳಲ್ಲಿ ಮಾನಸ್ ಮನೆಗೆ ಮರಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಆತ ತನ್ನ 28 ವರ್ಷದ ಸಹೋದರಿ ಶಿವಾ ವಾಜಪೇಯಿ ಅವರ ಮೇಲೂ ಗುಂಡು ಹಾರಿಸಿದ್ದಾನೆ. ಶಿವಾ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ನಂತರ ಮಾನಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ ಆತ್ಮಹತ್ಯೆಗೂ ಮುನ್ನ ವಾಟ್ಸ್ಆ್ಯಪ್‌ನಲ್ಲಿ ಸ್ಟೇಟಸ್ ಹಾಕಿದ್ದು, ಅದರಲ್ಲಿ ಪತ್ನಿ ಮತ್ತು ಸಹೋದರಿಯನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ, ದಿವ್ಯಾ ಅವರ ಸಹೋದರಿ ಪ್ರಜ್ಞಾ ಮತ್ತು ಆಕೆಯ ಪತಿ ಭಾರತ್ ಯಾದವ್ ಅವರಿಗೆ ಈ ವಿಚಾರದ ಬಗ್ಗೆ ಎಲ್ಲವೂ ತಿಳಿದಿದೆ ಎಂದು ಆರೋಪಿಸಿದ್ದಾನೆ.

ಲಖನೌ ಪೊಲೀಸ್ ಕಮಿಷನರ್ ತರುಣ್ ಗೌಬಾ ಅವರು ಪ್ರಾಥಮಿಕ ತನಿಖೆಯಲ್ಲಿ ಕುಟುಂಬ ಕಲಹವೇ ಈ ಸರಣಿ ಹತ್ಯೆ ಮತ್ತು ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular