HomeKarnatakaBIG NEWS: ಸಹೋದರಿಯನ್ನು ಪ್ರೀತಿಸಿದ್ದಕ್ಕೆ ಯುವಕನಿಗೆ ಚಾಕು ಇರಿದ ಅಣ್ಣ

BIG NEWS: ಸಹೋದರಿಯನ್ನು ಪ್ರೀತಿಸಿದ್ದಕ್ಕೆ ಯುವಕನಿಗೆ ಚಾಕು ಇರಿದ ಅಣ್ಣ

ಗದಗ: ತನ್ನ ತಂಗಿಯನ್ನು ಪ್ರೀತಿಸಿದ್ದಕ್ಕೆ ಯುವಕನಿಗೆ ಅಣ್ಣನೊಬ್ಬ ಚಾಕು ಇರಿದ ಘಟನೆ ಗದಗ ನಗರದ ಧೋಬಿ ಘಾಟ್ ಬಳಿ ನಡೆದಿದೆ.

ಧಾರವಾಡ ಮೂಲದ ಜಾಫರ್ ಜಮದಾರ (25) ಎಂಬ ಯುವಕನನ್ನು ರುಹಾನ್ ಎಂಬಾತ ಹಿಗ್ಗಾಮುಗ್ಗಾ ಥಳಿಸಿ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದಾನೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಯುವಕನನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಯುವಕನ ಸ್ಥಿತಿ ಗಂಭೀರವಾಗಿದೆ.

ರುಹಾನ್ ತಂಗಿಯನ್ನು ಜಾಫರ್ ಪ್ರೀತಿಸಿದ್ದ. ಹಲವುಬಾರಿ ರುಹಾನ್ ಎಚ್ಚರಿಕೆಯನ್ನು ನೀಡಿದ್ದ. ಆದರೂ ತಿದ್ದಿಕೊಳ್ಳದ ಜಾಫರ್ ರುಹಾನ್ ತಂಗಿಯ ಜೊತೆ ಪ್ರೀತಿ ಮುಂದುವರೆಸಿದ್ದ. ಇದೇ ಕಾರಣಕ್ಕೆ ರುಹಾನ್ ಹಾಗೂ ಜಾಫರ್ ನಡುವೆ ಜಗಳವಾಗಿತ್ತು. ಸ್ನೇಹಿತ ದಾದಾಫಿರ್ ಜೊತೆ ಸೇರಿ ರುಹಾನ್, ಜಾಫರ್ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆ ಬಳಿಕ ರುಹಾನ್ ನಾಪತ್ತೆಯಾಗಿದ್ದು, ದಾದಾಫಿರ್ ನನ್ನು ಪೊಲೀಸರು ಬಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular