HomeInternationalಬಸ್ ತಪ್ಪಿತು ಎಂಬ ಕಾರಣಕ್ಕೆ ಟ್ರಾಫಿಕ್ ಜಾಮ್ ಮಾಡಿದ ಭೂಪ

ಬಸ್ ತಪ್ಪಿತು ಎಂಬ ಕಾರಣಕ್ಕೆ ಟ್ರಾಫಿಕ್ ಜಾಮ್ ಮಾಡಿದ ಭೂಪ

ಒಂದು ವೇಳೆ ನೀವು ಬಸ್ ಮಿಸ್ ಮಾಡಿಕೊಂಡರೆ ಏನು ಮಾಡುತ್ತೀರಿ ? ಮುಂದಿನ ಬಸ್ಸಿಗಾಗಿ ಕಾಯುತ್ತೀರಿ ಅಲ್ಲವೇ ?

ಆದರೆ ಲಂಡನ್‌ನ ಈ ವ್ಯಕ್ತಿ ಬಸ್ ತಪ್ಪಿಹೋಯಿತೆಂದು ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಜಾಮ್ ಮಾಡಿದ್ದಾನೆ. ಈ ಘಟನೆಯ ವಿಡಿಯೋ ತುಣುಕು ಟಿಕ್‌ಟಾಕ್‌ನಲ್ಲಿ ಭಾರೀ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಚಾರ ದಟ್ಟಣೆ ಜೋರಾಗಿರುವ ಬೀದಿಯೊಂದರಲ್ಲಿ ಡಬಲ್ ಡೆಕ್ಕರ್‌ ಬಸ್ ಮುಂದೆ ನಿಂತುಕೊಂಡಿರುವ ಈತ ಚಾಲಕನೊಂದಿಗೆ ಮಾತನಾಡುತ್ತಿರುವ ವಿಡಿಯೋದಲ್ಲಿ, ಬಸ್ಸಿನ ಹಿಂದೆ ದೊಡ್ಡ ಪ್ರಮಾಣದಲ್ಲಿ ಕಾರುಗಳು ನಿಂತಿರುವುದನ್ನು ನೋಡಬಹುದಾಗಿದೆ. ಬಸ್ಸಿನ ಚಾಲಕ ಬಾಗಿಲು ತೆರೆಯುತ್ತಲೇ ಈತ ಅದರೊಳಗೆ ಹೋಗುತ್ತಾನೆ.

ಇಷ್ಟೆಲ್ಲಾ ಆದರೂ ಸಹ ಬಸ್ಸಿನ ಹಿಂದೆ ಇದ್ದ ಕಾರುಗಳು ಒಮ್ಮೆಯೂ ಸಹ ಹಾರ್ನ್ ಮಾಡುವುದಿಲ್ಲ. ಈತ ಬಸ್ಸಿನೊಳಗೆ ಹೋಗುತ್ತಲೇ ಬಸ್ಸು ಮುಂದೆ ಸಾಗಿದ್ದು, ಹಿಂದಿದ್ದ ಕಾರುಗಳು ಸಹ ಮತ್ತೆ ಚಾಲನೆ ಆರಂಭಿಸಿವೆ.

For Latest News Updates, Join Our Whatsapp Community🚩
RELATED ARTICLES

Most Popular