HomeKarnatakaಲೋಕಾಯುಕ್ತಕ್ಕೆ ಅವಹೇಳನಕಾರಿ ಪತ್ರ: ವ್ಯಕ್ತಿಗೆ ಕಠಿಣ ಜೈಲು ಶಿಕ್ಷೆ ವಿಧಿಸಿದ ಸೆಷನ್ಸ್ ಕೋರ್ಟ್

ಲೋಕಾಯುಕ್ತಕ್ಕೆ ಅವಹೇಳನಕಾರಿ ಪತ್ರ: ವ್ಯಕ್ತಿಗೆ ಕಠಿಣ ಜೈಲು ಶಿಕ್ಷೆ ವಿಧಿಸಿದ ಸೆಷನ್ಸ್ ಕೋರ್ಟ್

ಬಳ್ಳಾರಿ: ಕರ್ನಾಟಕ ಲೋಕಾಯುಕ್ತವನ್ನು ನಿಂದಿಸಿ ಪತ್ರ ಬರೆದಿದ್ದ ಬಳ್ಳಾರಿ ಮೂಲದ ವ್ಯಕ್ತಿಗೆ 6 ತಿಂಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಬೆಂಗಳೂರು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಕರ್ನಾಟಕ ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಸಂಸ್ಥೆಯ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿ ನಿಂದಿಸಿ ಪತ್ರ ಬರೆದ ಆರೋಪದ ಮೇಲೆ ಬಳ್ಳಾರಿ ನಿವಾಸಿಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯವು 6 ತಿಂಗಳ ಜೈಲು ಶಿಕ್ಷೆ ಮತ್ತು 5,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳ್ಳಾರಿಯ ಹಾವಿನಾಳ ಬಸಣ್ಣ ಕಾಂಪೌಂಡ್ ನಿವಾಸಿ ಎಸ್‌ಜಿ ಶಂಕರ್ ಶಿಕ್ಷೆಗೊಳಗಾದ ಆರೋಪಿ. ಲೋಕಾಯುಕ್ತ ಪ್ರಕಟಣೆಯ ಪ್ರಕಾರ, ಎಸ್‌ಜಿ ಶಂಕರ್ ಅವರು 2015 ರಲ್ಲಿ ಬಳ್ಳಾರಿಯ ಮುಜರಾಯಿ ಇಲಾಖೆಯ ಜಂಟಿ ಕಮಿಷನರ್ ವಿರುದ್ಧ ಅಧಿಕಾರ ದುರುಪಯೋಗದ ದೂರು ನೀಡಿದ್ದರು.

ಜಂಟಿ ಕಮಿಷನರ್ ಅವರು ಬಳ್ಳಾರಿಯ ದೇವಸ್ಥಾನವೊಂದರ ಸಮೀಪದಲ್ಲಿದ್ದ ಅಂಗಡಿಗಳನ್ನು ಕಾನೂನುಬಾಹಿರವಾಗಿ ತೆರವುಗೊಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಆದರೆ, ಲೋಕಾಯುಕ್ತ ತನಿಖೆ ಮತ್ತು ಪರಿಶೀಲನೆ ನಡೆಸಿದಾಗ ಜಂಟಿ ಕಮಿಷನರ್ ಅವರು ಸಂಪೂರ್ಣವಾಗಿ ಕಾನೂನುಬದ್ಧವಾಗಿಯೇ ಅಂಗಡಿಗಳನ್ನು ತೆರವುಗೊಳಿಸಿರುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಉಪಲೋಕಾಯುಕ್ತರು ಪ್ರಕರಣವನ್ನು ಮುಕ್ತಾಯಗೊಳಿಸಿ ಶಂಕರ್‌ಗೆ ಪತ್ರ ಕಳುಹಿಸಿದ್ದರು.

ಇದರಿಂದ ಅಸಮಾಧಾನಗೊಂಡ ಶಂಕರ್, 2022ರಲ್ಲಿ ಉಪಲೋಕಾಯುಕ್ತರಿಗೆ ಮತ್ತು 2023ರಲ್ಲಿ ಲೋಕಾಯುಕ್ತರಿಗೆ ಅವಹೇಳನಕಾರಿ ಮತ್ತು ನಿಂದನಾತ್ಮಕ ಪದಗಳನ್ನು ಬಳಸಿ ಎರಡು ಪತ್ರಗಳನ್ನು ಬರೆದಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆಯು ಕಾನೂನು ಕ್ರಮ ಏಕೆ ಜರುಗಿಸಬಾರದು ಎಂದು ಶಂಕರ್‌ಗೆ ಕಾನೂನು ನೋಟಿಸ್ ಜಾರಿ ಮಾಡಿತ್ತು. ಆದರೆ, ಆರೋಪಿ ಶಂಕರ್ ಆ ನೋಟಿಸ್‌ಗೂ ದರ್ಪದಿಂದ ಮತ್ತೊಂದು ನಿಂದನಾತ್ಮಕ ಪತ್ರ ಬರೆಯುವ ಮೂಲಕ ಉದ್ಧಟತನ ಮೆರೆದಿದ್ದರು.

ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಚೇರಿಯಿಂದ ಶಂಕರ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ಸೆಷನ್ಸ್ ಕೋರ್ಟ್ ಆರೋಪಿ ತಪ್ಪಿತಸ್ಥ ಎಂದು ಘೋಷಿಸಿ 6 ತಿಂಗಳ ಕಠಿಣ ಜೈಲು ಶಿಕ್ಷೆ ಪ್ರಕಟಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular