HomeEntertainmentಮತದಾನ ಮಾಡಿದ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು?

ಮತದಾನ ಮಾಡಿದ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು?

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನ ಘಟಾನುಘಟಿ ನಾಯಕ ನಟರು, ನಟಿಯರು ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಟಾಕ್ಸಿಕ್ ಚಿತ್ರದ ಚಿತ್ರೀಕರಣದ ಬ್ಯುಸಿ ನಡುವೆಯೂ ರಾಕಿಂಗ್ ಸ್ಟಾರ್ ಯಶ್ ಬೆಂಗಳೂರಿಗೆ ಆಗಮಿಸಿ ಮತದಾನ ಮಾಡಿದ್ದಾರೆ. ಬೆಂಗಳೂರಿನ ಕತ್ರಿಗುಪ್ಪೆ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಈ ವೇಳೆ ಮಾತನಾಡಿದ ನಟ ಯಶ್, ಎಲ್ಲರೂ ವೋಟ್ ಮಾಡಬೇಕು. ಇದು ನಮ್ಮ ಕರ್ತವ್ಯ ಹಾಗೂ ನಮ್ಮ ಹಕ್ಕು. ಮತದಾನ ಜಾಸ್ತಿಯಾದರೆ ಜಾಗೃತಿ ಜಾಸ್ತಿಯಾಗಿದೆ ಎಂದರ್ಥ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಲ್ಲರ ಅಭಿಪ್ರಾಯಗಳಿಗೂ ಪ್ರಜಾಪ್ರಭುತ್ವದಲ್ಲಿ ಬೆಲೆ ಇರಬೇಕು. ಕೆಲವೊಮ್ಮೆ ಕೆಲವರು ಮತದಾನ ಮಾಡ್ತಾರೆ. ಇನ್ನು ಕೆಲವರು ಮಾಡುವುದಿಲ್ಲ. ಇದರಿಂದ ಅವರ ಅಭಿಪ್ರಾಯವೇನೆಂಬುದು ಗೊತ್ತಾಗಲ್ಲ ಎಂದರು. ಸರ್ಕಾರದ ಇಷ್ಟುದಿನಗಳ ಕೆಲಸಗಳ ಪೈಕಿ ಕೆಲ ವಿಭಾಗಗಳ ಕೆಲಸ ನನಗೆ ತೃಪ್ತಿ ಇರಬಹುದು. ಇನ್ನು ಕೆಲ ಕ್ಷೇತ್ರಗಳಲ್ಲಿ ನನಗೆ ತೃಪ್ತಿ ಇಲ್ಲ. ಭಾರತಕ್ಕೆ ಈಗ ಉತ್ತಮ ವಕಾಶವಿದೆ. ಯುವಕರ ಸಂಖ್ಯೆ ನೋಡಿದರೆ ಇದು ಒಳ್ಳೆಯಸಮಯ ಎನಿಸುತ್ತದೆ ಎಂದರು.

For Latest News Updates, Join Our Whatsapp Community🚩
RELATED ARTICLES

Most Popular