ಬೆಳಗಾವಿ: ಏಪ್ರಿಲ್, ಮೇ ತಿಂಗಳಿನಲ್ಲಿ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆ ನಡೆಸುವ ಸಾಧ್ಯತೆಯಿದೆ. ಈ ಬಾರಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಚರ್ಚೆ ನಡೆಯುತ್ತಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್ ಸಂಗ್ರೇಶಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸಂಗ್ರೇಶಿ, ಜಿಲ್ಲಾ ಪುನರ್ ವಿಂಗಡಣಾ ವರದಿ ಪಡೆಯುವುದು ಸೇರಿದಂತೆ ವಿವಿಧ ಕಾರಣಕ್ಕಾಗಿ ಚುನಾವಣೆ ವಿಳಂಬವಾಗಿದೆ. ಹಾಗಾಗಿ ಏಪ್ರಿಲ್, ಮೇತಿಂಗಳಲ್ಲಿ ಚುನಾವಣೆ ಬಹುತೇಕ ಖಚಿತವಾಗಿದೆ ಎಂದರು.
ಸಂಬಂಧಪಟ್ಟ ಇಲಾಖೆಗೆ ಮೀಸಲಾತಿ ಪಟ್ಟಿ ನೀಡಲು ಸೂಚಿಸಲಾಗಿದೆ. ಅವುಗಳು ಸಿಕ್ಕ ತಕ್ಷಣ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣಾ ವೇಳಾ ಪಟ್ಟಿ ಪ್ರಕಟಿಸುತ್ತೇವೆ ಎಂದು ತಿಳಿಸಿದರು.
ಮತದಾರರ ಪಟ್ಟಿ ಸಿದ್ದಪಡಿಸಬೇಕು. 18 ವರ್ಷ ತುಂಬಿದ ಎಲ್ಲಾ ಯುವಕ, ಯುವತಿರನ್ನು ಈ ಪಟ್ಟಿಗೆ ಸೇರಿಸಬೇಕು. ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಲಾಗಿದೆ ಎಂದರು.
ಇನ್ನು ಇವಿಎಂ ಯಂತ್ರದ ಮೇಲೆ ರಾಜಕೀಯ ಪಕ್ಷಗಳು ಮಾತ್ರವಲ್ಲ ಜನಸಾಮಾನ್ಯರಿಗೂ ಅನುಮಾನವಿದೆ ಹಾಗಾಗಿ ಇವಿಎಂ ಹ್ಯಾಕ್ ಬಗ್ಗೆ ಪ್ರಾತ್ಯಕ್ಷಿಕವಾಗಿ ಪರೀಕ್ಷೆಯಾಗಬೇಕು. ಜನರಲ್ಲಿನ ಸಂಶಯ ನಿವಾರಿಸಲು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಯಾತಿ ಚುನವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಲಾಗುವುದು ಎಂದು ಹೇಳಿದರು.