
ಕ್ಯಾಲಿಫೋರ್ನಿಯಾದಲ್ಲಿ ಸರೀಸೃಪಗಳ ಮೃಗಾಲಯ ಸ್ಥಾಪಿಸಿರುವ ಜೇ ಬ್ರೀವರ್ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅನುಯಾಯಿಗಳಿಗೆ ಸರೀಸೃಪಗಳ ಕುರಿತಾದ ಆಸಕ್ತಿಕರ ವಿಷಯಗಳನ್ನು ಶೇರ್ ಮಾಡಿಕೊಂಡು ಟಚ್‌ನಲ್ಲಿರುತ್ತಾರೆ.
ಮಾರುತಿ ಸುಜ಼ುಕಿ ಮಾಲೀಕರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ
ತಮ್ಮ ಇತ್ತೀಚಿನ ಪೋಸ್ಟ್ ಒಂದರಲ್ಲಿ ಬ್ರೀವರ್ ಎರಡು ತಲೆಯ ಹಲ್ಲಿಯೊಂದರ ಕ್ಲೋಸ್‌ಅಪ್ ದೃಶ್ಯವೊಂದನ್ನು ತೋರಿದ್ದಾರೆ.
ತಮ್ಮ ಅಂಗೈನಲ್ಲಿ ನೀಲಿ ಬಣ್ಣದ ನಾಲಿಗೆಯ ಪುಟ್ಟ ಹಲ್ಲಿಯೊಂದನ್ನು ಹಿಡಿದಿರುವ ಬ್ರೀವರ್, ಅದರ ಎರಡು ತಲೆಗಳನ್ನು ತೋರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಸುಂದರ ಜೀವಿಯ ಅಪರೂಪದ ರೀತಿಯ ಸೃಷ್ಟಿಯನ್ನು ಬ್ರೀವರ್ ವಿವರಿಸಿದ್ದಾರೆ.
ವಿಡಿಯೋಗೆ 67,000 ವೀಕ್ಷಣೆಗಳು ಸಂದಾಯವಾಗಿದ್ದು, ನೆಟ್ಟಿಗರಿಂದ ಬಹಳಷ್ಟು ಪ್ರತಿಕ್ರಿಯೆಗಳು ಸಿಕ್ಕಿವೆ.