
ಮೃಗಾಲಯದ ಸಿಬ್ಬಂದಿಯೊಬ್ಬ ಹುಲಿಯ ದಾಳಿಯಿಂದ ಮೃತಪಟ್ಟಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಇದರ ಭಯಾನಕ ವಿಡಿಯೋ ವೈರಲ್ ಆಗಿದ್ದು, ನೋಡುಗರನ್ನು ಬೆಚ್ಚಿಬೀಳಿಸುವಂತಿದೆ.
ಆಹಾರ ನೀಡುವ ಸಲುವಾಗಿ 23 ವರ್ಷದ ವೃತ್ತಿಪರ ಸಿಬ್ಬಂದಿ ಪಂಜರದಲ್ಲಿರುವ ಹುಲಿಗೆ ಮುದ್ದಿಸುತ್ತಿದ್ದ. ಆತನಿಗೆ ಇದೇನು ಹೊಸತಾಗಿರಲಿಲ್ಲ.ಆದರೆ ಅಂದು ಆತನ ಅದೃಷ್ಟ ನೆಟ್ಟಗಿರಲಿಲ್ಲ. ಯಾಕೋ ಸಿಟ್ಟಿನಿಂದ ಇದ್ದ ಹುಲಿ ಆತನ ಕೈಯನ್ನು ಬಲವಾಗಿ ಹಿಡಿದುಕೊಂಡಿದೆ. ನೋವಿನಿಂದ ಜೋಸ್ ಡಿ ಜೀಸಸ್ ಕಿರುಚಾಡಿದ್ದಾನೆ. ಎಷ್ಟೇ ಮಾಡಿದರೂ ಹುಲಿ ತನ್ನ ಪಟ್ಟು ಬಿಡಲಿಲ್ಲ.
ಆತನನ್ನು ಒಳಕ್ಕೆ ಎಳೆದುಕೊಳ್ಳಲು ಹುಲಿ ಪ್ರಯತ್ನಿಸಿತು. ಆದರೆ ಪಂಜರ ಇದ್ದುದರಿಂದ ಅದು ಸಾಧ್ಯವಾಗಲಿಲ್ಲ. ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿ ಜೀಸಸ್ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಅವರ ಕೈ ಕಟ್ ಮಾಡಬೇಕು ಎಂದು ವೈದ್ಯರು ಸೂಚಿಸಿದರು. ಆದರೆ ಅವರು ಒಪ್ಪಿಗೆ ನೀಡಲಿಲ್ಲ. ತೀವ್ರವಾದ ಮಧುಮೇಹ ಸೇರಿದಂತೆ ಕೆಲವೊಂದು ಅನಾರೋಗ್ಯ ಎದುರಿಸುತ್ತಿದ್ದ ಜೀಸಸ್ ಮೃತಪಟ್ಟಿದ್ದಾರೆ. ಮೆಕ್ಸಿಕೋದ ಪೆರಿಬಾನ್‌ನಲ್ಲಿ ಪಂಜರದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
https://www.youtube.com/watch?v=uLuU4GgLy64