ವಿಶ್ವದಲ್ಲೇ ಅತ್ಯಂತ ಅಪರೂಪ ಎನ್ನಲಾದ ಸಸ್ತನಿ ವರ್ಗದ ಪ್ರಾಣಿ ’ಆರ್ದ್‌ವಾರ್ಕ್’ ನ ಸಂತತಿ ಬೆಳೆದಿದೆ. 90 ವರ್ಷಗಳ ಬಳಿಕ ಆರ್ದ್‌ವಾರ್ಕ್‌ನ ಅತ್ಯಂತ ಆರೋಗ್ಯವಂತ ಮರಿಯೊಂದು ಬ್ರಿಟನ್ ಮೃಗಾಲಯದಲ್ಲಿ ಜನಿಸಿದೆ. ಇದಕ್ಕೆ ಹ್ಯಾರಿ ಪಾಟರ್ ಕಥಾ ಸರಣಿಯಲ್ಲಿನ ಜನಪ್ರಿಯ ಪಾತ್ರ ’’ಡೋಬಿ’’ಯ ಹೆಸರಿಡಲಾಗಿದೆ.
ಛೆಸ್ಟರ್ ಝೂನಲ್ಲಿ ಸಂಭ್ರಮ ಮುಗಿಲುಮುಟ್ಟಿದೆ.
ಉದ್ದನೆಯ ಕಿವಿಗಳು, ಸ್ವಲ್ಪವೂ ಕೂದಲೇ ಇಲ್ಲದ ದೇಹ, ಮುದುರುಗಟ್ಟಿದ ಚರ್ಮ, ದೊಡ್ಡದಾದ ಉಗುರುಗಳ ಆರ್ದ್‌ವಾರ್ಕ್‌ನ ಮರಿಯನ್ನು ತೋರಿಸಿ ಎಂದು ಜನರು ಮೃಗಾಲಯದ ಸಿಬ್ಬಂದಿಗೆ ದುಂಬಾಲು ಬೀಳುತ್ತಿದ್ದಾರೆ. ಸದ್ಯಕ್ಕೆ ಡೋಬಿಯು ತಾಯಿಯ ಜತೆ ಏಕಾಂತದಲ್ಲಿದೆ. ಡೋಬಿಯ ತಂದೆಯ ಹೆಸರು ಒನಿ ಮತ್ತು ತಾಯಿಯ ಹೆಸರು ಕೊಸ್ ಎಂದು.
ಬೆಕ್ಕಸಬೆರಗಾಗಿಸುತ್ತೆ 9 ವರ್ಷದ ಬಾಲಕನ ಭಾರಿ ಶ್ರೀಮಂತಿಕೆ
ಜನರ ಕಾಟ ತಡೆಯಲಾರದೆಯೇ ಛೆಸ್ಟರ್ ಝೂನ ಸಿಬ್ಬಂದಿಯು ಡೋಬಿಯ ಹಲವು ಫೋಟೊಗಳನ್ನು ಫೇಸ್‌ಬುಕ್ ಖಾತೆಗೆ ಅಪ್‌ಲೋಡ್ ಮಾಡಿದ್ದಾರೆ. ಆರ್ದ್‌ವಾರ್ಕ್ ಮರಿಯನ್ನು ’’ಕಾಫ್’’ ಎಂದೇ ಸಂಬೋಧಿಸಲಾಗುತ್ತದೆ. ಆಫ್ರಿಕಾದ ಸಹಾರ ಪ್ರಾಂತ್ಯದಲ್ಲಿ ಮಾತ್ರವೇ ಕಾಣಸಿಗುವ ಅಪರೂಪದ ಪ್ರಾಣಿ ಆರ್ದ್‌ವಾರ್ಕ್. ಕೃಷಿ ಭೂಮಿ ನಾಶವಾಗುತ್ತಿರುವ ಪರಿಣಾಮ ಈ ಸಸ್ತನಿ ಅಳಿವಿನ ಅಂಚಿಗೆ ಬಂದು ತಲುಪಿದೆ.
ಇವುಗಳ ಮಾಂಸಕ್ಕೆ ಆಫ್ರಿಕಾದಲ್ಲಿ ಬಹಳ ಬೇಡಿಕೆ, ಹಾಗಾಗಿ ಬೇಟೆಗಾರರು ಕೂಡ ಇವುಗಳ ಬೆನ್ನತ್ತಿದ್ದಾರೆ. ಯುರೋಪಿನಾದ್ಯಂತ ಕೇವಲ 66 ಹಾಗೂ ವಿಶ್ವಾದ್ಯಂತ 109 ಆರ್ದ್‌ವಾರ್ಕ್‌ಗಳು ಸದ್ಯ ಮೃಗಾಲಯಗಳಲ್ಲಿ ಮಾತ್ರವೇ ಬದುಕುತ್ತಿವೆ. ಉದ್ದನೆಯ ಉಗುರುಗಳಿಂದ ಗೆದ್ದಲಿನ ಗೂಡು ಕೊರೆದು, ಅವುಗಳನ್ನು ಭಕ್ಷಿಸುವ ವಿಶೇಷ ಸಸ್ತನಿ ಪ್ರಾಣಿ ಇದು.