ಫುಡ್ ಡೆಲಿವರಿ ಸಂಸ್ಥೆಗಳಾದ ಜ಼ೊಮ್ಯಾಟೋ ಹಾಗೂ ಸ್ವಿಗ್ಗಿ ಇನ್ನು ಮುಂದೆ ಸರಕು ಮತ್ತು ಸೇವಾ ತೆರಿಗೆಯ ಹೊಸ ಚಾಟಿಯೇಟು ತಿನ್ನಬೇಕಾದ ಸಾಧ್ಯತೆ ಎದುರಿಸುತ್ತಿವೆ.
ಗ್ರಾಹಕರ ಕಡೆಯಿಂದ ಡೆಲಿವರಿ ಬಾಯ್ಸ್‌ಗೆ ಸಿಗುವ ಟಿಪ್ಸ್, ಸರ್ಜ್ ಶುಲ್ಕ, ಡೆಲಿವರಿ ಶುಲ್ಕ ಹಾಗೂ ಪ್ಯಾಕೇಜಿಂಗ್ ಶುಲ್ಕಗಳ ಮೇಲೂ ಇನ್ನು ಮುಂದೆ ಜಿಎಸ್‌ಟಿ ವಿಧಿಸುವ ಸಾಧ್ಯತೆ ಇದೆ.
ರಾಜ್ಯ ಪೊಲೀಸ್ ನೇಮಕಾತಿಯಲ್ಲಿ ತಿದ್ದುಪಡಿ; ಬಡ್ತಿ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರದಿಂದ ಸಿಹಿ ಸುದ್ದಿ
ಸದ್ಯದ ಮಟ್ಟಿಗೆ ರೆಸ್ಟೋರೆಂಟ್‌ಗಳು 5% ಜಿಎಸ್‌ಟಿ ಪಾವತಿ ಮಾಡುತ್ತಿವೆ. ಜ಼ೊಮ್ಯಾಟೊ ಹಾಗು ಸ್ವಿಗ್ಗಿಗಳು 5% ಜಿಎಸ್‌ಟಿ ಪಾವತಿಸಿದರೆ ಅದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಈ ಬಗ್ಗೆ ಸ್ಪಷ್ಟನೆ ಕೋರಿ ಎರಡೂ ಸಂಸ್ಥೆಗಳು ತೆರಿಗೆ ತಜ್ಞರ ಬಳಿ ತೆರಳಿವೆ.
ಈ ರಾಶಿಯವರಿಗೆ ಕಾದಿದೆ ಇಂದು ವೃತ್ತಿರಂಗದಲ್ಲಿ ಶುಭ ಸುದ್ದಿ…..!
ಸ್ವಿಗ್ಗಿ ಹಾಗೂ ಜ಼ೊಮ್ಯಾಟೋಗಳು ಇನ್ನು ಮುಂದೆ 5% ಜಿಎಸ್‌ಟಿ ಪಾವತಿ ಮಾಡಬೇಕಾಗಿ ಬರಬಹುದು ಎಂದು ಕಳೆದ ತಿಂಗಳು ಜಿಎಸ್‌ಟಿ ಸಮಿತಿ ತಿಳಿಸಿದ್ದು, ಮುಂದಿನ ವರ್ಷದ ಜನವರಿಯಿಂದ ಈ ಕರ ಜಾರಿಗೆ ಬರಬಹುದು.
ತಾವು ಡೆಲಿವರಿ ಮಾಡುವ ಆಹಾರದ ಮೆಲೆ 5% ತೆರಿಗೆಯನ್ನು ಜ಼ೊಮ್ಯಾಟೋ ಹಾಗೂ ಸ್ವಿಗ್ಗಿ ವಿಧಿಸಬೇಕಾಗಿ ಬರಬಹುದು. ಆದರೆ, ಡೆಲಿವರಿ, ಸರ್ಜ್ ಹಾಗೂ ಪ್ಯಾಕೇಜಿಂಗ್‌ಗಳ ಮೇಲೆ ತೆಗೆದುಕೊಳ್ಳುವ ಹೆಚ್ಚುವರಿ ಶುಲ್ಕಗಳ ಮೇಲೆ ಜಿಎಸ್‌ಟಿ ಅನ್ವಯವಾಗುತ್ತದೆಯೇ ಎಂದು ನೋಡಬೇಕಾಗುತ್ತದೆ.