ಆನ್ಲೈನ್ ಫುಡ್ ಡೆಲಿವರಿ ಅಪ್ಲಿಕೇಶನ್ ಜೊಮ್ಯಾಟೊ ತನ್ನ ಲಾಯಲ್ಟಿ ಪ್ರೋಗ್ರಾಮ್ ಜೊಮಾಟೊ ಪ್ರೊ ಅನ್ನು ಕೊನೆಗೊಳಿಸಿದೆ.
ಅವಧಿ ಮೀರಿದ ಪ್ರೊ ಸದಸ್ಯತ್ವವನ್ನು ನವೀಕರಿಸಲು ಪ್ರಯತ್ನಿಸಿದ ಬಳಕೆದಾರರಿಗೆ ಜೊಮ್ಯಾಟೊ ಸಂದೇಶವನ್ನು ಕಳುಹಿಸಿದೆ.
ಜೊಮ್ಯಾಟೊ ಪ್ರೋ ಪ್ರೋಗ್ರಾಮ್ನಲ್ಲಿ ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು. ನಾವು ನಿಮ್ಮ ಸದಸ್ಯತ್ವವನ್ನು ನವೀಕರಿಸುತ್ತಿಲ್ಲ ಏಕೆಂದರೆ ನಾವು ನಿಮಗಾಗಿ ಹೊಸ ಮತ್ತು ಸುಧಾರಿತ ವ್ಯವಸ್ಥೆಗಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಇತ್ತೀಚಿನ ಕೊಡುಗೆ ಅಥವಾ ಅಪ್ಡೇಟ್ಗೆ ಜೊಮ್ಯಾಟೊ ಅಪ್ಲಿಕೇಶನ್ ಪರಿಶೀಲಿಸಲು ನಾವು ವಿನಂತಿಸುತ್ತೇವೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಜೊಮಾಟೊ ಪ್ರೊ ಸದಸ್ಯತ್ವವನ್ನು ಸ್ಥಗಿತಗೊಳಿಸುವ ಕಾರಣವನ್ನು ಕಂಪನಿಯು ಅಧಿಕೃತವಾಗಿ ದೃಢಪಡಿಸಿಲ್ಲ, ಆದರೆ ಮಾಧ್ಯಮ ವರದಿಯ ಪ್ರಕಾರ, ಕಂಪನಿಯು ಹೊಸ ಪ್ರೋಗ್ರಾಮ್ ಸಿದ್ಧಪಡಿಸುತ್ತಿದೆ, ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.
ಹೊಸ ಯೋಜನೆ ಬಗ್ಗೆ ಪ್ರತಿಕ್ರಿಯೆಯನ್ನು ಸಂಗ್ರಹಿಸುತ್ತಿದ್ದೇವೆ. ನಮ್ಮ ಗ್ರಾಹಕರು, ರೆಸ್ಟೋರೆಂಟ್ ಪಾಲುದಾರರಿಂದ ಫೀಡ್ಬ್ಯಾಕ್ ಪಡೆಯುತ್ತಿದ್ದೇವೆ ಎಂದು ಕಂಪನಿ ಹೇಳಿಕೊಂಡಿದೆ.
ಜೊಮ್ಯಾಟೊ ಪ್ರೊ, ಜೊಮ್ಯಾಟೊ ಪ್ರೊ ಪ್ಲಸ್ಗೆ ಹೊಸ ಸದಸ್ಯರು ಅಥವಾ ವ್ಯಾಪಾರಿ ಪಾಲುದಾರರ ಕೋರಿಕೆ ಸ್ವೀಕರಿಸುತ್ತಿಲ್ಲ. ಸಕ್ರಿಯ ಸದಸ್ಯರು ತಮ್ಮ ಪ್ರಯೋಜನಗಳನ್ನು ಪಡೆಯುವುದನ್ನು ಮುಂದುವರಿಸುತ್ತಾರೆ, ಅವರ ಸದಸ್ಯತ್ವದ ಅವಧಿ ಮುಗಿದ ನಂತರ ಅವರು ಇನ್ನು ಮುಂದೆ ತಮ್ಮ ಸದಸ್ಯತ್ವಗಳನ್ನು ವಿಸ್ತರಿಸಲು ಅಥವಾ ನವೀಕರಿಸಲು ಸಾಧ್ಯವಾಗುವುದಿಲ್ಲ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.